ಉತ್ತರಪ್ರದೇಶ: ಸಿವಿಲ್ ನ್ಯಾಯಾಧೀಶರೊಬ್ಬರು ಉತ್ತರಪ್ರದೇಶದ ಬದಾಯುನ್ನಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೌ ನಿವಾಸಿಯಾಗಿದ್ದ ಜಸ್ಟಿಸ್ ಜ್ಯೋತ್ಸನಾ ರೈ ಮೃತರು. ಕಳೆದ ಒಂದು ವರ್ಷದಿಂದ ಬಡಾಯುನ್ನ ಸಿವಿಲ್ ನ್ಯಾಯಾಧೀಶರಾಗಿ ನಿಯೋಜನೆ ಗೊಂಡಿದ್ದರು.
ಶನಿವಾರ ಬೆಳಗ್ಗೆ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಅವರ ಸಹಾಯಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಸ್ಟಿಸ್ ಆತ್ಮಹತ್ಯೆ ಮಾಹಿತಿ ತಿಳಿದ ಜಿಲ್ಲಾ ನ್ಯಾಯಾಧೀಶರು, ಎಸ್ಎಸ್ಪಿ ಮತ್ತು ನ್ಯಾಯಾಂಗ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಫೋರೆನ್ಸಿಕ್ ತಂಡ ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದು ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸುತ್ತಿದೆ.
ನ್ಯಾಯಮೂರ್ತಿ ಜ್ಯೋತ್ಸನಾ ರೈ ಅವರು ಒಂದು ವರ್ಷದ ಹಿಂದೆ ಅಯೋಧ್ಯೆಯಿಂದ ಬಡಾಯುನ್ ಗೆ ನಿಯೋಜನೆಗೊಂಡಿದ್ದರು. ಇದು ಅವರ ಎರಡನೇ ಪೋಸ್ಟಿಂಗ್ ಆಗಿತ್ತು.