Thursday, 12th December 2024

ನಿವೃತ್ತಿಯ ಮಾತುಗಳನ್ನಾಡಿದ ಹಾಲಿ ಸಿಎಂ ನಿತೀಶ್​ ಕುಮಾರ್​!

ಪಟನಾ: ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನ.7ರಂದು ನಡೆಯಲಿದೆ. ಎಲ್ಲ ಪಕ್ಷಗಳಿಂದ ಪ್ರಚಾರದ ಭರಾಟೆ ಜೋರಾಗಿದ್ದು, ಹಾಲಿ ಸಿಎಂ ನಿತೀಶ್​ ಕುಮಾರ್​ ರಾಜಕೀಯ ನಿವೃತ್ತಿಯ ಮಾತುಗಳನ್ನಾಡುವ ಮೂಲಕ ಜನರನ್ನು ಅಚ್ಚರಿಗೆ ದೂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಆಗಲಿದೆ ಎಂದು ಧಮ್ಧಾಹದ ಪೂರ್ನಿಯಾ ಸಮಾವೇಶ ದಲ್ಲಿ ಜೆಡಿಯು ಪಕ್ಷದ 69 ವರ್ಷದ ನಿತೀಶ್​ ಹೇಳಿದರು. ಇಂದು ಪ್ರಚಾರದ ಅಂತಿಮ ದಿನ. ನಾಡಿದ್ದು ಅಂತಿಮ ಹಂತದ ಮತ ದಾನ ನಡೆಯಲಿದೆ. ಎಲ್ಲವು ಒಳ್ಳೆಯದಾಗಲಿದ್ದು, ಅಂತ್ಯವು ಸಹ ಒಳ್ಳೆಯದ್ದೇ ಆಗಿರುತ್ತದೆ ಎಂದು ತಿಳಿಸಿದರು.

ಬಿಹಾರದ ಮೂರನೇ ಅಥವಾ ಅಂತಿಮ ಹಂತದ ಚುನಾವಣೆ ನ.7ರಂದು ನಡೆಯಲಿದ್ದು, ಬಿಹಾರದ ಗದ್ದುಗೆ ಯಾರು ಏರಲಿ ದ್ದಾರೆ ಎಂಬುದು ನ. 10ರಂದು ನಿರ್ಧಾರವಾಗಲಿದೆ.