Friday, 22nd November 2024

ಸಿಎಂಡಿಆರ್‌ಎಫ್‌ ಹಣ ದುರುಪಯೋಗ ಪ್ರಕರಣ: ನಾಳೆ ತೀರ್ಪು…?

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಮಾ.೩೧ರಂದು ತೀರ್ಪು ಪ್ರಕಟಿಸುವ ನಿರೀಕ್ಷೆ ಯಿದೆ.

2018ರಲ್ಲಿ ಸಿಎಂಡಿಆರ್‌ಎಫ್‌(ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ)ನಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಪಿಣರಾಯಿ ವಿಜಯನ್ ವಿರುದ್ಧ, ಸಾಮಾಜಿಕ ಕಾರ್ಯಕರ್ತ ಆರ್.ಎಸ್.ಶಶಿಕುಮಾರ್ ಪ್ರಕರಣ ದಾಖಲಿಸಿ ದ್ದರು.

ಕಳೆದ ವಾರ ಅರ್ಜಿದಾರ ಕೇರಳ ಹೈಕೋರ್ಟ್‌ಗೆ ಮೊರೆ ಹೋದ ನಂತ ರವೇ ಈ ಪ್ರಕರಣದ ತೀರ್ಪಿನ ಪ್ರಕ್ರಿಯೆ ಚುರುಕು ಗೊಂಡಿದೆ.

ಸಿಪಿಐ(ಎಂ) ಮೃತ ಶಾಸಕರ ಕುಟುಂಬ, ಉನ್ನತ ರಾಜಕೀಯ ನಾಯಕರು ಸೇರಿದಂತೆ ಪೊಲೀಸ್‌ ಅಧಿಕಾರಿ ಅಪಘಾತದಲ್ಲಿ ಮೃತಟ್ಟಿದ್ದರು. ಇವರ ಕುಟುಂಬಕ್ಕೆ ಪರಿಹಾರ ನೀಡದೆ, ಪರಿಹಾರ ನೀಡಲಾಗಿದೆ ಎಂದು ಹೇಳಲಾಗಿತ್ತು. ಈ ಮೂಲಕ ಸಿಎಂಡಿಆರ್‌ಎಫ್‌ನಲ್ಲಿ ಹಣ ದುರುಪಯೋಗ ಮಾಡಲಾಗಿದೆ ಎಂದು ಅರ್ಜಿದಾರ ದೂರಿನಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತದ ಉಭಯ ನ್ಯಾಯಮೂರ್ತಿಗಳ ಪೀಠ ಶುಕ್ರವಾರ ತೀರ್ಪು ನೀಡುವ ನೀರಿಕ್ಷೆ ಇದೆ.

ಸೆಪ್ಟೆಂಬರ್ 2018 ರಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂಬಂಧ ವಿಚಾರಣೆಯು ಮಾರ್ಚ್ 18, 2022 ರಂದು ಕೊನೆಗೊಂಡಿತ್ತು. ಅಂದಿನಿಂದ ತೀರ್ಪನ್ನು ಬಾಕಿ ಇರಿಸಲಾಗಿದೆ.