Sunday, 15th December 2024

ಧ್ವಜ ವಿಚಾರದಲ್ಲಿ ಗುಂಪು ಘರ್ಷಣೆ: 36 ಜನರ ಬಂಧನ

ಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಸಾವ್ಲಿ ಪಟ್ಟಣದಲ್ಲಿ ಧಾರ್ಮಿಕ ಧ್ವಜ ಹಾಕುವ ವಿಚಾರದಲ್ಲಿ ಎರಡು ಗುಂಪುಗಳು ಪರಸ್ಪರ ಘರ್ಷಣೆ ಮತ್ತು ಕಲ್ಲು ತೂರಾಟ ನಡೆಸಿದ್ದು, 36 ಜನರನ್ನು ಬಂಧಿಸಲಾಗಿದೆ.

ಧಮೀಜಿ ಕಾ ಡೇರಾ ಪ್ರದೇಶದ ವಿದ್ಯುತ್ ಕಂಬದ ಮೇಲೆ ಮತ್ತೊಂದು ಸಮು ದಾಯದ ಸದಸ್ಯರು ತಮ್ಮ ಧ್ವಜದ ಜೊತೆಗೆ ಧಾರ್ಮಿಕ ಧ್ವಜವನ್ನು ಹಾಕಲು ಪ್ರಯತ್ನಿಸುತ್ತಿರುವುದನ್ನು ಜನರ ಗುಂಪೊಂದು ವಿರೋಧಿಸಿದ ನಂತರ ಘಟನೆ ಸಂಭವಿಸಿದೆ.

ವಿಷಯ ಉಲ್ಬಣಗೊಂಡು ಎರಡೂ ಸಮುದಾಯಗಳು ಪರಸ್ಪರ ಕಲ್ಲು ತೂರಾಟ ಆರಂಭಿಸಿದರು. ವಾಹನ ಮತ್ತು ಅಂಗಡಿಗೆ ಗಲಭೆಕೋರರಿಂದ ಹಾನಿಯಾಗಿದೆ ಎಂದು ಸಾವ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಆರ್ ಮಹಿದಾ ತಿಳಿಸಿದ್ದಾರೆ.

ಎರಡೂ ಗುಂಪುಗಳಿಂದ ಎಫ್‌ಐಆರ್ ದಾಖಲಿಸಲಾಗಿದ್ದು, 43 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಹಿದಾ ಹೇಳಿದರು.