Thursday, 12th December 2024

ಬೈಕ್ ರ‍್ಯಾಲಿ ವೇಳೆ ಘರ್ಷಣೆ: ಕರ್ಫ್ಯೂ ಜಾರಿ

ಜೈಪುರ: ರಾಜಸ್ಥಾನದ ಕರೌಲಿಯಲ್ಲಿ, ಹಿಂದೂ ಹೊಸ ವರ್ಷಾಚರಣೆ ಅಂಗ ವಾಗಿ ನಡೆದ ಬೈಕ್ ರ‍್ಯಾಲಿ ವೇಳೆ ಎರಡು ಕೋಮುಗಳ ಮಧ್ಯೆ ಘರ್ಷಣೆ ಸಂಭ ವಿಸಿದೆ.

ಶನಿವಾರ ಸಂಜೆ ಘಟನೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕರೌಲಿ ನಗರ ದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು. ಇಂಟರ್ನೆಟ್ ಸೇವೆ ನಿರ್ಬಂಧಿಸ ಲಾಗಿದೆ.

ಹಿಂದೂಗಳ ಬೈಕ್ ರ‍್ಯಾಲಿ ಹಾದು ಹೋಗುವ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ 42 ಜನರು ಗಾಯಗೊಂಡಿ ದ್ದಾರೆ. ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿಲಾಗಿದೆ.

ಪ್ರಕರಣ ಸಂಬಂಧ 30 ಮಂದಿ ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗುಮಾರಿಯಾ ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಜೈಪುರದ ಎಸ್‌ಎಂಎಸ್‌ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿ ದ್ದಾರೆ.

ಕರೌಲಿಯಲ್ಲಿ ಸೋಮವಾರ ರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಏ.3ರಂದು ಮಧ್ಯರಾತ್ರಿಯವರೆಗೆ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸ ಲಾಗಿದೆ. ಅಹಿತಕರ ಘಟನೆ ಜರುಗದಂತೆ ಎಚ್ಚರವಹಿಸಲಾಗಿದ್ದು, ಕರೌಲಿಯಲ್ಲಿ 650ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.