Thursday, 12th December 2024

ವಾಣಿಜ್ಯ ಸಿಲಿಂಡರ್‌ ಬೆಲೆ 36 ರೂ. ಕಡಿತ

ನವದೆಹಲಿ: ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕಿಲೋಗ್ರಾಂ LPG ಸಿಲಿಂಡರ್‌ ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆಗೊಳಿಸಿದೆ. ಇಂದಿನಿಂದ ಜಾರಿಗೆ ಬರಲಿದೆ.

ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ಎಲ್‌.ಪಿ.ಜಿ. ಸಿಲಿಂಡರ್ ಬೆಲೆ 36 ರೂಪಾಯಿ ಗಳಷ್ಟು ಅಗ್ಗವಾಗಿದೆ. ದೆಹಲಿಯಲ್ಲಿ ಎಲ್‌.ಪಿ.ಜಿ. ಸಿಲಿಂಡರ್‌ ಬೆಲೆಯಲ್ಲಿ 36 ರೂಪಾಯಿ ಇಳಿಕೆಯಾದ ನಂತರ, ಪ್ರತಿ ಸಿಲಿಂಡರ್‌ಗೆ 1976.50 ರೂ. ಆಗಿದೆ.

ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ 2095.50 ರೂ.ಆಗಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2132 ರೂ. ಇತ್ತು. ಮುಂಬೈನಲ್ಲಿ ಪ್ರತಿ ಸಿಲಿಂಡರ್‌ಗೆ 1936.50 ರೂ.ಗಳಾಗಿದ್ದು, ಈ ಹಿಂದೆ ಪ್ರತಿ ಸಿಲಿಂಡರ್‌ಗೆ 1972.50 ರೂ. ದರ ಇತ್ತು. ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ 2141 ರೂ.ಆಗಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2177.50 ರೂ. ಇತ್ತು.

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 36 ರೂಪಾಯಿ ಇಳಿಕೆಯಾಗಿದೆ.