ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್‌ನ ಬೆಲೆ ಈಗ 1,856.50 ರೂಪಾಯಿ ಇದೆ. ಕಳೆದ ತಿಂಗಳು ಕೂಡ 91.50 ರೂ. ಇಳಿಕೆ ಮಾಡಲಾ ಗಿತ್ತು. ತೈಲ ಕಂಪನಿಗಳು ಈ ವರ್ಷ ಮಾರ್ಚ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 350.50 ರೂ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 50 ರೂ. ಹೆಚ್ಚಿಸಿ ದ್ದವು. ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್‌ಗೆ 25 ರೂ. ಏರಿಕೆ ಮಾಡಲಾಗಿತ್ತು.
ಕಳೆದ ವರ್ಷ ಸೆ.1 ರಂದು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 91.50 ರೂ. ಕಡಿತಗೊಳಿಸ ಲಾಯಿತು. ಆಗಸ್ಟ್ 1, 2022 ರಂದು ಸಹ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 36 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು. ಅದಕ್ಕೂ ಮೊದಲು ಜುಲೈ 6 ರಂದು 8.5 ರೂ ಕಡಿತಗೊಳಿಸಲಾಗಿತ್ತು.
ವರದಿಗಳ ಪ್ರಕಾರ, ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ ₹1856.50 ಆಗಲಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಲೆ ಇಳಿಕೆಯಿಂದ ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1,808.50 ರೂ ಆಗಿದ್ದರೆ, ಕೋಲ್ಕತ್ತಾದಲ್ಲಿ 1,960.50 ರೂ. ಹಾಗೂ ಚೆನ್ನೈನಲ್ಲಿ 2,021.50 ರೂ.ಗೆ ಸಿಲಿಂಡರ್ ಮಾರಾಟವಾಗಲಿದೆ. ನೂತನ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.
171.50 ರೂ. ಇಳಿಕೆ: ಪರಿಷ್ಕರಣೆಗೆ ಮೊದಲು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ ದೆಹಲಿಯಲ್ಲಿ 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಕ್ರಮವಾಗಿ 2,028 ರೂ., ಕೋಲ್ಕತ್ತಾದಲ್ಲಿ 2,132 ರೂ., ಮುಂಬೈನಲ್ಲಿ 1,980 ರೂ. ಮತ್ತು ಚೆನ್ನೈನಲ್ಲಿ 2,192.50 ರೂ.ಗೆ ಮಾರಾಟವಾಗುತ್ತಿತ್ತು. ಪೆಟ್ರೋಲಿಯಂ ಮತ್ತು ತೈಲ ಕಂಪನಿಗಳು ಏ.1 ರಂದು ಸಹ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 91.50 ರೂ. ಕಡಿತಗೊಳಿಸಿತ್ತು. ಈಗ ಮತ್ತೆ 171.50 ರೂ. ಇಳಿಕೆ ಮಾಡಲಾಗಿದೆ.