Friday, 22nd November 2024

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 83.50 ರೂ.ಗೆ ಇಳಿಕೆ

ವದೆಹಲಿ : ಕೇಂದ್ರ ಸರ್ಕಾರವು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಕೆಯಾಗಿದ್ದು, ಈ ಮೂಲಕ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,773 ರೂ.ಗೆ ತಲುಪಿದೆ.

19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಸಲಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,773 ರೂ.ಇದೆ ದೇಶೀಯ ಎಲ್ಪಿಜಿ ಅನಿಲ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ಗಳ ದರಗಳು ಕಳೆದ ತಿಂಗಳಂತೆಯೇ ಉಳಿದಿವೆ.

ಎಲ್ಪಿಜಿ ಬೆಲೆ, ಹೆಚ್ಚಾಗಿ ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳ ಮೇಲೆ ಅವಲಂಬಿತವಾಗಿದೆ. ಇವುಗಳು ಹೆಚ್ಚಾದಾಗ, ಎಲ್ಪಿಜಿ ಸಿಲಿಂಡರ್ ದರಗಳು ಸಹ ಹೆಚ್ಚಾಗುತ್ತವೆ. ನವದೆಹಲಿಯಲ್ಲಿ ಇಂದು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆ 1,103.00 ರೂ. ಇವುಗಳನ್ನು ಭಾರತ ಸರ್ಕಾರವು ಪ್ರತಿ ತಿಂಗಳು ಪರಿಷ್ಕರಿಸುತ್ತದೆ.

ದೆಹಲಿ, ಕೋಲ್ಕತಾ ಮತ್ತು ಮುಂಬೈನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು83.50 ರೂ.ಗೆ ಇಳಿಸ ಲಾಗಿದೆ. ಇದರ ನಂತರ, ದೇಶದ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1,773 ರೂ., ಕೋಲ್ಕತ್ತಾದಲ್ಲಿ 1960.50 ರೂ., ಮುಂಬೈನಲ್ಲಿ 1725 ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1937 ರೂ.ಗೆ ಇದೆ.