Friday, 22nd November 2024

ವಾಣಿಜ್ಯ ಸಿಲಿಂಡರ್ ದರ 350.50 ರೂಪಾಯಿ ಹೆಚ್ಚಳ

ನವದೆಹಲಿ: ಕಳೆದ ಹಲವಾರು ತಿಂಗಳುಗಳಿಂದ ಅಡುಗೆ ಅನಿಲ ದರವನ್ನು ಸ್ಥಿರವಾಗಿರಿಸಲಾಗಿದ್ದು, ಇಂದು ಏರಿಕೆ ಮಾಡಲಾಗಿದೆ. ಮಾರ್ಚ್ 1, ರಿಂದ ಜಾರಿಗೆ ಬರುವಂತೆ ಅಡುಗೆ ಅನಿಲ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಇದರಿಂದಾಗಿ ಬೆಂಗಳೂರಿಗರು ಪ್ರತಿ ಸಿಲಿಂಡರ್ 14.2 ಕೆಜಿ ಎಲ್‌ಪಿಜಿಗೆ 1,105.50 ರೂಪಾಯಿ ಪಾವತಿಸಬೇಕಾಗು ತ್ತದೆ.

ಈ ಹಿಂದೆ ಎಲ್‌ಪಿಜಿ ದರವು 1,055.50 ರೂಪಾಯಿ ಆಗಿತ್ತು. ಆದರೆ ಮಾರ್ಚ್ 1ರಂದು 50 ರೂಪಾಯಿ ದರ ಏರಿಕೆ ಮಾಡಿದ ಬಳಿಕ ಎಲ್‌ಪಿಜಿ ದರ ಬೆಂಗಳೂರಿನಲ್ಲಿ 1,105.50 ರೂಪಾಯಿಗೆ ತಲುಪಿದೆ. ಮಂಗಳೂರಿನಲ್ಲಿ 1,053.50 ಆಗಿದ್ದ ಅಡುಗೆ ಅನಿಲ ದರವು ಪ್ರಸ್ತುತ ದರ ಪರಿಷ್ಕರಣೆ ಮಾಡಿದ ಬಳಿಕ 1,103.50 ರೂಪಾಯಿಗೆ ಏರಿಕೆಯಾಗಿದೆ.

ವಾಣಿಜ್ಯ ಎಲ್‌ಪಿಜಿ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್ ದರವನ್ನು 350.50 ರೂಪಾಯಿ ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರವು 2119.50 ರೂಪಾಯಿಗೆ ತಲುಪಿದೆ. ಇದಕ್ಕೂ ಮುನ್ನ ಹಲವಾರು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಸ ಲಾಗಿದೆ. ಒಟ್ಟಿನಲ್ಲಿ ಕಳೆದ 8 ವರ್ಷಗಳಲ್ಲಿ ಅಡುಗೆ ಅನಿಲ ದರವು ಭಾರೀ ಹೆಚ್ಚಳವಾಗಿದೆ. ನೂತನ ಅಡುಗೆ ಅನಿಲ ದರವು ಈ ಕೂಡಲೇ ಜಾರಿಗೆ ಬರಲಿದೆ.