ಏಪ್ರಿಲ್ 1 ರಂದು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 250 ರೂ. ಹೆಚ್ಚಿಸಿದ ಪರಿಣಾಮ 2,253 ರೂ.ಗೆ ತಲುಪಿತ್ತು. ಮಾರ್ಚ್ 1 ರಂದು, ವಾಣಿಜ್ಯ ಎಲ್ಪಿಜಿ ಬೆಲೆಯನ್ನು 105 ರೂ. ಹೆಚ್ಚಿಸಲಾಗಿತ್ತು.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2,355.50 ರೂ. ಏರಿಕೆಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಬೆಲೆ ಯನ್ನು ಪ್ರತಿ ಸಿಲಿಂಡರ್‌ಗೆ 2,205 ರೂ. ನಿಂದ 2,307 ರೂ.ಗೆ ಏರಿಸಲಾಗಿದೆ.
ಕೋಲ್ಕತ್ತಾದಲ್ಲಿ ಗ್ರಾಹಕರು 19 ಕೆಜಿ ಸಿಲಿಂಡರ್‌ಗೆ 2,351 ರೂ ಬದಲಿಗೆ 2,455 ರೂಗಳನ್ನು ಪಾವತಿಸಬೇಕಾಗುತ್ತದೆ. ಚೆನ್ನೈನಲ್ಲಿರುವ ಗ್ರಾಹಕರು ಇಂದಿನಿಂದ ರೂ 2,406 ಬದಲಿಗೆ ರೂ 2,508 ಪಾವತಿಸಬೇಕಾಗುತ್ತದೆ.