Sunday, 15th December 2024

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 39.50 ರೂ. ಇಳಿಕೆ

ವದೆಹಲಿ: ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಗೂ ಮುನ್ನವೇ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 39.50 ರೂಪಾಯಿ ಇಳಿಕೆಯಾಗಿದೆ.

ಡಿ.1 ರಂದು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಬದಲಾಯಿಸಲಾಗಿತ್ತು. ಆಗ ಸಿಲಿಂಡರ್ ಬೆಲೆಯನ್ನು 21 ರೂ. ಹೆಚ್ಚಿಸಲಾಗಿತ್ತು. ಆದರೆ, ಅದಕ್ಕೂ ಮುನ್ನ ನವೆಂಬರ್ 16 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 57 ರೂ. ಕಡಿತಗೊಳಿಸಲಾಗಿತ್ತು. ಕೆಲವು ಸಮಯದಿಂದ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಬಹುತೇಕ ಪ್ರತಿ ತಿಂಗಳು ಬದಲಾವಣೆ ಕಂಡುಬರುತ್ತಿದೆ. ಸಿಲಿಂಡರ್ ದರವನ್ನು ಪದೇ ಪದೇ ಪರಿಷ್ಕರಿಸಲಾಗುತ್ತಿದೆ.

ವಿವಿಧ ನಗರಗಳಲ್ಲಿ 19 ಕೆ.ಜಿ ಎಲ್.ಪಿ.ಜಿ ಸಿಲಿಂಡರ್ ಬೆಲೆ :

ದೆಹಲಿ – 1757.50 ರೂ.

ಕೋಲ್ಕತ್ತಾ – 1869 ರೂ.

ಮುಂಬೈ – 1710 ರೂ.

ಚೆನ್ನೈ – 1929.50 ರೂ.