ಗಿರ್’ಸೋಮನಾಥ್: ಗುಜರಾತ್ ರಾಜ್ಯದ ಉಲಾ ತಾಲೂಕು, ನವಬಂದರ್ ಗ್ರಾಮದಲ್ಲಿ ಕೋಮು ಸಂಘರ್ಷವಾಗಿದೆ.
ಎರಡು ಕೋಮಿನ ನೂರಾರು ಮಂದಿ ಪರಸ್ಪರ ಬಡಿದಾಡಿಕೊಂಡಿದ್ದು, ಪೊಲೀಸರು 2 ಸಾವಿರಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಪೊಲೀಸರು ಸೇರಿದಂತೆ 12ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆರೆಯೊಂದರಲ್ಲಿ ಮೀನು ಹಿಡಿಯುವ ಎರಡು ದೋಣಿಗಳ ನಡುವೆ ಡಿಕ್ಕಿ ಸಂಭವಿಸಿ ನಡೆದ ಗಲಾಟೆ ಕೋಮು ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ. ಎರಡು ಕೋವಿನ ಸಾವಿರಾರು ಮಂದಿ ಕೈಗೆ ಸಿಕ್ಕ ವಸ್ತು ಗಳನ್ನು ಎಸೆದು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಜಗಳ ಬಿಡಿಸಲು ಬಂದ ಪೊಲೀಸರ ಮೇಲೂ ಗಲಭೆಕೋರರು ದಾಳಿ ನಡೆಸಿರುವುದರಿಂದ ಆರು ಮಂದಿ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.
ಟಿಯರ್ ಗ್ಯಾಸ್ ಸಿಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗಲಭೆಗೂ ಕಾರಣಕರ್ತರಾಗಿದ್ದ 47 ಮಂದಿ ಸೇರಿದಂತೆ ಅಪರಿಚಿತ ಎರಡು ಸಾವಿರ ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.