Thursday, 12th December 2024

ಎರಡು ಕೋಮುಗಳ ಘರ್ಷಣೆ: 19 ಮಂದಿ ಸೆರೆ

ಡೋದರಾ: ಗುಜರಾತ್‌ನ ವಡೋದರಾದಲ್ಲಿ ದೀಪಾವಳಿ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ವಡೋದರಾದ ಪಾಣಿಗೇಟ್‌ ಬಳಿ ಮಂಗಳವಾರ ಮಧ್ಯರಾತ್ರಿ ಸುಮಾರಿಗೆ ಘರ್ಷಣೆ ನಡೆದಿದೆ. ಈ ಘರ್ಷಣೆಯು ಪಟಾಕಿ ಸಿಡಿಸುವ ವಿಚಾರವಾಗಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಘರ್ಷಣೆ ಸಂಭವಿಸಿದ ಒಂದು ಗಂಟೆಯ ಬಳಿಕೆ ಸ್ಥಳೀಯ ವ್ಯಕ್ತಿಯೊಬ್ಬ ತನ್ನ ಮನೆಯ ಮೂರನೇ ಮಹಡಿಯಿಂದ ಪೆಟ್ರೋಲ್‌ ಬಾಂಬ್‌ ಅನ್ನು ಎಸೆದಿದ್ದಾನೆ. ಈ ಆರೋಪಿಯನ್ನೂ ಬಂಧಿಸಲಾಗಿದೆ ಎಂದು ವಡೋದರಾ ಉಪ ಪೊಲೀಸ್ ಆಯುಕ್ತ ಹೇಳಿದ್ದಾರೆ.

ರಾಕೆಟ್‌ ಪಟಾಕಿ ಸಿಡಿದ ಸ್ಥಳದಲ್ಲಿದ್ದ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ವಿಚಾರವಾಗಿ ಎರಡು ಕೋಮಿನವರ ನಡುವೆ ಜಗಳ ಆರಂಭವಾಗಿದೆ.