ಪ್ರಮುಖವಾಗಿ ರಾಜ್ಯಸಭಾ ಸದಸ್ಯ ಅಮೀ ಯಾಜ್ಞಿಕ್ ಅವರು ಬಿಜೆಪಿಯ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ವಿರುದ್ಧ ಬಿಜೆಪಿ ಭದ್ರಕೋಟೆಯಾದ ಅಹಮದಾಬಾದ್ನ ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 2017 ರ ಚುನಾವಣೆಯಲ್ಲಿ ಪಟೇಲ್ ಅವರು ಅತಿ ಹೆಚ್ಚು ಅಂತರದಿಂದ ಗೆದ್ದಿದ್ದರು. ಪಟ್ಟಿಯಲ್ಲಿರುವ ಇತರ ಪ್ರಮುಖ ಹೆಸರುಗಳಲ್ಲಿ ಭಾವನಗರದ ಮಹುವಾ ಕ್ಷೇತ್ರದಿಂದ ಕನುಭಾಯಿ ಕಲ್ಸಾರಿಯಾ ಸೇರಿದ್ದಾರೆ. ಅವರು ಬಿಜೆಪಿ ಶಾಸಕರಾಗಿದ್ದಾಗ 2012 ರಲ್ಲಿ ನಿರ್ಮಾ ಸ್ಥಾವರದ ವಿರುದ್ಧ ನಡೆಸಿದ್ದ ಆಂದೋ ಲನಕ್ಕೆ ಹೆಸರುವಾಸಿಯಾಗಿದ್ದಾರೆ.
ಗುಜರಾತ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಅರ್ಜುನ್ ಮೊದ್ವಾಡಿಯಾ ಪೋರ್ ಬಂದರ್ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ ನಾಯಕ ಬಾಬುಭಾಯ್ ಬೋಖಿರಿಯಾ ವಿರುದ್ಧ ಸತತ ಎರಡು ಚುನಾವಣೆಗಳಲ್ಲಿ ಸೋತಿದ್ದಾರೆ.