Wednesday, 11th December 2024

ಕಾಂಗ್ರೆಸ್ ಕಾರ್ತಕರ್ತರಿಂದ ಸ್ಮೃತಿ ಇರಾನಿಗೆ ಘೇರಾವ್

ವಾರಣಾಸಿ: ದಲಿತ ಯುವತಿ ಸಾವಿನ ಪ್ರಕರಣವನ್ನು ಖಂಡಿಸಿ, ವಾರಣಾಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಸಾಗುತ್ತಿದ್ದ ಕಾರಿಗೆ ಘೇರಾವ್ ಹಾಕಿದ ಘಟನೆ ನಡೆಯಿತು.

ಘೇರಾವ್ ಹಾಕಿದ ಕಾರ್ಯಕರ್ತರು, ಹತ್ರಾಸ್ ಘಟನೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ದರು. ‘ಸ್ಮೃತಿ ಗೋ ಬ್ಯಾಕ್, ಸ್ಮೃತಿ ಇರಾನಿ ರಿಸೈನ್’ ಎಂದು ಪ್ರತಿಭಟನಾಕಾರು ಘೋಷಣೆ ಕೂಗಿದರು. ಪ್ರತಿಭಟನಾ ನಿರತ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂಧನಕ್ಕೊಳಗಾದ ಕಾಂಗ್ರೆಸ್ ಸಂಸದ ವೇಣುಗೋಪಾಲ್, ಮೃತಪಟ್ಟ ದಲಿತ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗು ವುದು ನಮ್ಮ ಉದ್ದೇಶವಾಗಿದೆ. ಇದಕ್ಕೂ ಮುನ್ನ, ಹತ್ರಾಸ್’ಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ತೆರಳುವ ಮೊದಲೇ, ಉತ್ತರ ಪ್ರದೇಶ ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶ ಗಡಿ ಮಾರ್ಗಗಳನ್ನು ಮುಚ್ಚಿದರು.