Wednesday, 11th December 2024

ಇನ್ನು 100 ವರ್ಷವಾದರೂ ಕಾಂಗ್ರೆಸ್​’ಗೆ ಅಧಿಕಾರ ದಕ್ಕಲ್ಲ: ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ

ನವದೆಹಲಿ : ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್​ ಸತತವಾಗಿ ಸೋಲುತ್ತಿದೆ, ಅಧಿಕಾರ ಕಳೆದುಕೊಳ್ಳುತ್ತಿದೆ. ಅವರು ವಾಸ್ತವದೊಂದಿಗೆ ಸಂಪರ್ಕ ಕಡಿದುಕೊಂಡಿ ದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ಇನ್ನು 100 ವರ್ಷವಾದರೂ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರ ನೀಡದಿರಲು ಜನ ನಿರ್ಧರಿಸಿದ್ದಾರೆ. ದೇಶದಲ್ಲಿ ಬಡವರನ್ನು ಹಸಿವಿನಿಂದ ನರಳದಂತೆ ಮಾಡಿದ್ದೇವೆ. 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ನೀಡಿದ್ದೇವೆ. ಗಾಂಧೀಜಿಯವರ ಸ್ವದೇಶಿ ಕನಸಿಗೆ ಕಾಂಗ್ರೆಸ್​ ಅಡ್ಡಿ ಯಾಗಿದೆ. ಆತ್ಮ ನಿರ್ಭರ ಭಾರತಕ್ಕೆ ಕಾಂಗ್ರೆಸ್​ ವಿರುದ್ಧವಾಗಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಡವರ ಸಂತಸ ದೇಶದ ಶಕ್ತಿಯನ್ನು ಹೆಚ್ಚಿಸಿದೆ. ಬಡವರ ಮನೆಗಳಿಗೆ ಶೌಚಾಲಯ, ವಿದ್ಯುತ್​​ ಸಂಪರ್ಕ ಬಂದಿದೆ. ಇದೀಗ ಬಡವರೂ ಬ್ಯಾಂಕ್​ ಖಾತೆ ತೆರೆಯುವಂತಾಗಿದೆ. ದೇಶದಲ್ಲಿ ಬಡವರ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಬಂದಿದೆ. 2014ರವರೆಗೂ ಜನರಿಗೆ ಯೋಜನೆಗಳು ತಲುಪುತ್ತಿರಲಿಲ್ಲ. 50 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವನ್ನ ನಡೆಸಿದೆ.

ಉತ್ತರ ಪ್ರದೇಶ, ಕರ್ನಾಟಕ, ಬಿಹಾರ, ಗುಜರಾತ್​ನಲ್ಲಿ ಕಾಂಗ್ರೆಸ್​ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.