Sunday, 15th December 2024

ಮಹಾಜನ್‌ ಸಾವಿನ ಕುರಿತು ಟ್ವೀಟ್‌: ಕ್ಷಮೆಯಾಚಿಸಿದ ಶಶಿ ತರೂರ್‌

ಇಂದೋರ್: ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವಿನ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ನಂತರ ಅದನ್ನು ಡೀಲಿಟ್ ಮಾಡಿದ್ದು, ತನ್ನ ತಪ್ಪಿಗೆ ಮಹಾಜನ್ ಪುತ್ರನಿಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ.

78 ವರ್ಷದ ಬಿಜೆಪಿ ನಾಯಕಿಯ ಸಾವಿನ ಬಗ್ಗೆ ಸಾಮಾಜಿ ಜಾಲತಾಣಲದಲ್ಲಿ ಸಾಕಷ್ಟು ವದಂತಿಗಳು ಹರಿದಾಡಿದ್ದವು. ಶಶಿ ತರೂರ್ ಸಹ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ ಮಹಾಜನ್ ತಾವು ಆರೋಗ್ಯವಾಗಿರುವುದಾಗಿ ಹೇಳಿದ ನಂತರ ಡಿಲೀಟ್ ಮಾಡಿದ್ದರು.

ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ಸುಮಿತ್ರಾ ಮಹಾಜನ್ ಜಿ ಅವರ ಪುತ್ರನೊಂದಿಗೆ ಮಾತನಾಡಿದ್ದೇನೆ. ಮಹಾಜನ್ ಅವರು ತುಂಬಾ ಆರೋಗ್ಯವಾಗಿದ್ದಾರೆ ಎಂದು ಕೇಳಿ ಸಂತೋಷವಾಯಿತು. ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸಿದ್ದೇನೆ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಸುಮಿತ್ರಾ ಮಹಾಜನ್ ಅವರು, ನಾನು ಚೆನ್ನಾಗಿದ್ದೇನೆ. ಆರೋಗ್ಯವಾಗಿದ್ದೇನೆ ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೆ ಮಾಡಿದ ಬಳಿಕ ನನ್ನ ಸಾವು ದೂರವಾಗಿದೆ. ಆದರೆ ನನ್ನ ಸಾವನ್ನು ಅವಸರವಾಗಿ ಪ್ರಕಟ ಮಾಡುವ ಜರೂರು ಏನಿತ್ತು? ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿದ್ದಾರೆ.