Sunday, 15th December 2024

ಬಿಜೆಪಿ ಸೇರಿದ ಗೋವಾದ ಎಂಟು ಕಾಂಗ್ರೆಸ್ ಶಾಸಕರು

ಣಜಿ: ಬುಧವಾರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತಿಯಲ್ಲಿ ಗೋವಾದ ಎಂಟು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ. ಶಾಸಕರಿಗೆ ಕೇಸರಿ ಬಾವುಟ ನೀಡಿ ಸ್ವಾಗತಿಸಲಾಯಿತು.

ಶಾಸಕರಾದ ಮೈಕಲ್ ಲೋಬೊ, ಮಾಜಿ ಸಿಎಂ ದಿಗಂಬರ್ ಕಾಮತ್, ದಿಲಿಹಾ ಲೋಬೊ, ರಾಜೇಶ್ ಪಾಲ್‌ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ ಅಮೋಂಕರ್, ಅಲೆಕ್ಸೊ ಸಿಕ್ವೇರಾ, ರುಡಾಲ್ಫ್ ಫರ್ನಾಂಡಿಸ್ ಬಿಜೆಪಿ ಸೇರಿದರು. ಇದರೊಂದಿಗೆ ಗೋವಾ ಕಾಂಗ್ರೆಸ್‌ನಲ್ಲಿ ಮೂವರೇ ಶಾಸಕರು ಉಳಿದಂತಾಗಿದೆ.

‘ಕಾಂಗ್ರೆಸ್ ಚೊಡೋ, ಬಿಜೆಪಿಕೊ ಜೋಡೊ, (ಕಾಂಗ್ರೆಸ್ ಬಿಡಿ- ಬಿಜೆಪಿ ಸೇರಿ) ಗೋವಾದ ಸಮಗ್ರ ಅಭಿವೃದ್ಧಿಗಾಗಿ ನಾವು 8 ಶಾಸಕರು ಬಿಜೆಪಿ ಸೇರಿದ್ದೇವೆ’ ಎಂದು ಲೊಬೋ ಹೇಳಿದ್ದಾರೆ.

40 ಶಾಸಕ ಸದಸ್ಯತ್ವ ಬಲದ ಗೋವಾ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿತ್ತು. 2019 ರಲ್ಲೂ ಕೂಡ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಜಿಗಿದಿದ್ದರು.

ಇನ್ನೊಂದೆಡೆ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬೇಕು ಎಂಬ ನಿರ್ಣಯವನ್ನೇ ಕೈಗೊಂಡಿದ್ದಾರೆ.

ವಿರೋಧ ಪಕ್ಷದ ನಾಯಕ ಮೈಕಲ್ ಲೋಬೊ ಅವರು ಇತರ ಏಳು ಶಾಸಕರ ಜೊತೆ ಈ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಶಾಸಕ ದಿಗಂಬರ್ ಕಾಮತ್ ಇದನ್ನು ಅಂಗೀಕರಿಸಿದ್ದಾರೆ.