ತಮಿಳುನಾಡಿನ ಕಾಂಗ್ರೆಸ್ ಘಟಕ ಕೂಡ ಪೇರರಿವಾಳನ್ ಬಿಡುಗಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ರಾಜೀವ್ ಹತ್ಯೆ ಪ್ರಕರಣದಲ್ಲಿ ಏಳು ಮಂದಿಯನ್ನು ಅಪರಾಧಿ ಎಂದು ಹೇಳಿದ್ದ ಇದೇ ಸುಪ್ರೀಂ ಕೋರ್ಟ್ ಇದೀಗ ಕೆಲ ಕಾನೂನು ಅಂಶಗಳನ್ನು ಉಲ್ಲೇಖಿಸಿ ಪೇರರಿವಾಳನ್ನನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ ಕೆಎಸ್ ಅಳಗಿರಿ, ತಮಗೆ ತೀರ್ಪು ಟೀಕಿಸುವ ಉದ್ದೇಶವಿಲ್ಲ. ಆದರೆ, ಈ ಅಪರಾಧಿ ಗಳು ಅಮಾಯಕರಲ್ಲ, ಕೊಲೆಗಾರರು ಎಂದು ಟೀಕಿಸಿದ್ದಾರೆ.
ಪ್ರಕರಣದಲ್ಲಿ 31 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಜೀವಾವಧಿ ಅಪರಾಧಿಗಳಲ್ಲಿ ಒಬ್ಬರಾದ ಎಜಿಪೇರರಿವಾಳನ್ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಧನು ಎಂದು ಗುರುತಿಸಲ್ಪಟ್ಟ ಮಹಿಳಾ ಆತ್ಮಾಹುತಿ ಬಾಂಬರ್ನಿಂದ ಹತ್ಯೆಗೀಡಾದರು. ಪ್ರಕರಣದಲ್ಲಿ ಏಳು ಮಂದಿಗೆ ಶಿಕ್ಷೆಯಾಗಿತ್ತು.