Thursday, 12th December 2024

‘ಭಾರತ್ ಜೋಡೋ ಯಾತ್ರೆ’ ವೇಳೆ ಗೂಂಡಾಗಿರಿ: ಕೈ ಕಾರ್ಯಕರ್ತರ ಅಮಾನತು

ಕೊಲ್ಲಂ: ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ‘ಭಾರತ್ ಜೋಡೋ ಯಾತ್ರೆ’ ಯನ್ನು ಎಂಟು ದಿನಗಳು ಕೇರಳದ ಕೊಲ್ಲಂನಲ್ಲಿ ಕಾಂಗ್ರೆಸ್‌ ಪಕ್ಷವು ಪಾದ ಯಾತ್ರೆ ಮಾಡಿದೆ.

ಈ ವೇಳೆ ಕೈ ಕಾರ್ಯಕರ್ತರು ಮಾಡಿದ ಕೆಲವು ಕೆಲಸಗಳು ಈಗ ಬೆಳಕಿಗೆ ಬಂದಿವೆ. ಕೆಲವು ಕಾರ್ಯಕರ್ತರು ಪಾದಯಾತ್ರೆ ವೇಳೆ ದಾರಿಯಲ್ಲಿ ಸಿಕ್ಕ ಅಂಗಡಿಗಳಿಗೆ ಹೋಗಿ ಮಾಲೀಕರಿಗೆ ಬೆದರಿಕೆ ಹಾಕಿ ವಸ್ತುಗಳನ್ನು ದೋಚಿ ದ್ದಾರೆ. ಅಲ್ಲದೇ 2,000 ಬೇಡಿಕೆ ಇಟ್ಟಿದ್ದರು ಎಂಬ ಆರೋಗಳು ಕೇಳಿ ಬಂದಿವೆ. ಇದರ ವಿಡಿಯೋಗಳು ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

‘ಭಾರತ್ ಜೋಡೋ ಯಾತ್ರೆ’ಯ ಪೋಸ್ಟರ್‌ಗಳನ್ನು ಹೊತ್ತಿದ್ದ ಕೆಲವು ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯನ್ನು ‘ಸ್ವೀಕಾರಾರ್ಹವಲ್ಲ’ ಎಂದು ಕರೆದಿರುವ ಪಕ್ಷವು, ಈ ಕೃತ್ಯದಲ್ಲಿ ಭಾಗಿಯಾಗಿರುವ ಕಾರ್ಯಕರ್ತರನ್ನು ಅಮಾನತುಗೊಳಿಸಿದೆ ಎಂದು ಹೇಳಿದೆ.