Sunday, 6th October 2024

Narendra Modi : ಜಾತಿವಾದ ಮುಂದಿಟ್ಟು ದೇಶಭಕ್ತಿ ಹತ್ತಿಕ್ಕಲು ಕಾಂಗ್ರೆಸ್‌ ಯತ್ನ; ಮೋದಿ ಆರೋಪ

Narendra Modi

ನವದೆಹಲಿ: ಜಾತಿವಾದ ಮತ್ತು ಧರ್ಮದ ಮೂಲಕ ದೇಶದ ದೇಶಭಕ್ತಿ ಹತ್ತಿಕ್ಕಲು ಕಾಂಗ್ರೆಸ್ ಬಯಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಆರೋಪಿಸಿದ್ದಾರೆ. ಹರಿಯಾಣದ ಪಲ್ವಾಲ್‌ನಲ್ಲಿ ಚುನಾವಣಾ ರ್ಯಾಲಿಯನ್ನು (Haryana Elecion Rally) ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ದೇಶಕ್ಕೆ ಮುಖ್ಯವಾದ ಪ್ರತಿಯೊಂದು ವಿಷಯಕ್ಕೆ ಅಡ್ಡಿ ಮಾಡುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ತರಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

ಅವರು ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮೀಸಲಾತಿ ನೀಡಲಿಲ್ಲ . ಕಾಂಗ್ರೆಸ್ ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್ ಸಮಸ್ಯೆಯಲ್ಲಿ ಸಿಲುಕಿಸಿತ್ತು. ಕಾಂಗ್ರೆಸ್ ದೇಶ ಮತ್ತು ಅದರ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲಿಲ್ಲ, ಬದಲಿಗೆ ತನ್ನದೇ ಆದ ಕುಟುಂಬವನ್ನು ಗಟ್ಟಿ ಮಾಡಿಕೊಳ್ಳಲು ತನ್ನ ಎಲ್ಲಾ ಶಕ್ತಿ ಬಳಸಿತು” ಎಂದು ಪ್ರಧಾನಿ ಹೇಳಿದರು.

ನಾನು ಇಂದು ಇಡೀ ದೇಶವನ್ನು ಕೇಳುತ್ತೇನೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ತನಕ ಅನೇಕ ಸಮಸ್ಯೆಗಳನ್ನು ಮಾಡಿದೆ. ಇದೀಗ ಸರ್ಕಾರ ರಚಿಸುವ ಕನಸು ಕಾಣುತ್ತಿದೆ. ಬಿಜೆಪಿ ಬೆಂಬಲಿಗರು ದೇಶಭಕ್ತರು. ಅವರು ದೇಶಭಕ್ತ ಜನರನ್ನು ದಾರಿತಪ್ಪಿಸಲು ಯೋಜನೆಗಳನ್ನು ರೂಪಿಸುತ್ತಾರೆ. ಜಾತಿವಾದ ಪ್ರಚಾರ ಮಾಡುವ ಮೂಲಕ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧಎತ್ತಿಕಟ್ಟುವ ಮೂಲಕ ದೇಶಭಕ್ತಿಯನ್ನು ಹತ್ತಿಕ್ಕಲು ಬಯಸುತ್ತದೆ,” ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ಭರ್ಜರಿ ಜಯ

ರ್ಯಾಲಿಯಲ್ಲಿ ಪ್ರಧಾನಿ ಮೋದಿ, ಕಳೆದ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಬಿಜೆಪಿಯ ಪ್ರಚಂಡ ವಿಜಯ ನೆನಪಿಸಿಕೊಂಡರು. ಕಾಂಗ್ರೆಸ್‌ನ ಸೂತ್ರವು ಕೆಲಸ ಮಾಡುವುದಿಲ್ಲ ಅಥವಾ ಇತರರನ್ನು ಕೆಲಸ ಮಾಡಲು ಬಿಡುವುದಿಲ್ಲ. ಕಾಂಗ್ರೆಸ್‌ನ ರಾಜಕೀಯವು ಸುಳ್ಳು ಭರವಸೆಗಳಿಗೆ ಸೀಮಿತವಾಗಿದ್ದರೆ, ಬಿಜೆಪಿಯ ರಾಜಕೀಯವು ಕಠಿಣ ಪರಿಶ್ರಮದ ಮೇಲೆ ಕೇಂದ್ರೀಕೃತವಾಗಿದೆ. ಕಾಂಗ್ರೆಸ್ ಎಂದಿಗೂ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ” ಎಂದು ಮೋದಿ ಹೇಳಿದರು.

ಇದನ್ನೂ ಓದಿ: Superstar Rajinikanth : ಸೂಪರ್‌ಸ್ಟಾರ್ ರಜನಿಕಾಂತ್‌ ಆಸ್ಪತ್ರೆಗೆ ದಾಖಲು

10 ವರ್ಷಗಳು ಕಳೆದಿವೆ ಮತ್ತು ಹರಿಯಾಣದ ಜನರು ತಮಗೆ ಅಧಿಕಾರ ನೀಡುತ್ತಾರೆ ಎಂದು ಕಾಂಗ್ರೆಸ್ ಭಾವಿಸಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕೂಡ ಇದೇ ತಪ್ಪು ಕಲ್ಪನೆ ಹೊಂದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಹರಿಯಾಣ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಒಳ ಜಗಳವನ್ನು ಇಲ್ಲಿನ ಜನರು ನೋಡುತ್ತಿದ್ದಾರೆ. ದಲಿತ, ಹಿಂದುಳಿದ ಮತ್ತು ಶೋಷಿತ ಸಮುದಾಯಕ್ಕೆ ಸೇರಿದವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು. ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.