Saturday, 14th December 2024

ಕಾಂಗ್ರೆಸ್​​ಗೆ ಶಾಕ್: ಸ್ಫರ್ಧೆಯಿಂದ ಹಿಂದೆ ಸರಿದ ಸುಚರಿತ ಮೊಹಾಂತಿ

ಪುರಿ: ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​​​​ ಅಭ್ಯರ್ಥಿ ಕಾಂಗ್ರೆಸ್​​ ಅಭ್ಯರ್ಥಿ ಸುಚರಿತ ಮೊಹಾಂತಿ ಅವರು ನಾನು ಪುರಿ ಕ್ಷೇತ್ರದಿಂದ ಸ್ವರ್ಧಿಸು ವುದಿಲ್ಲ ಎಂದು ಹೇಳಿದ್ದಾರೆ.
ಪುರಿಯಲ್ಲಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಪಕ್ಷ ಹಣ ನೀಡಿಲ್ಲ, ಆ ಕಾರಣಕ್ಕೆ ಹಣ ಕೊರತೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವು ದಿಲ್ಲ ಎಂದು ಹೇಳಿದ್ದಾರೆ. ನನಗೆ ಹಣಕಾಸಿನ ಕೊರತೆಯಿರುವ ಕಾರಣ ನನ್ನ ಪ್ರಚಾರಕ್ಕೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪ್ರಚಾರಕ್ಕೆ ಧನಸಹಾಯ ನೀಡಲು ವಿಫಲವಾದ ಕಾರಣಗಳನ್ನು ನೀಡಿ ಹಾಗೂ ನಾನು ಉಳಿತಾಯ ಮಾಡಿದ ಎಲ್ಲ ಹಣವನ್ನು ಈಗಾಗಲೇ ಪ್ರಚಾರಕ್ಕೆ ಹಾಕಿದ್ದೇನೆ. ಇನ್ನು ಮುಂದಿನ ಪ್ರಚಾರಕ್ಕೆ ಹಣ ನನ್ನಲ್ಲಿ ಇಲ್ಲ” ಎಂದು ಪತ್ರ ಬರೆದಿದ್ದಾರೆ.

ನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತನಾಗಿದ್ದೆ. ಆದರೆ ಈಗ ರಾಜಕೀಯ ಕ್ಷೇತ್ರಕ್ಕಾಗಿ ನನ್ನನ್ನೂ ನಾನು ತೊಡಗಿಸಿಕೊಂಡಿದ್ದೇನೆ. ನನ್ನಲ್ಲಿರುವ ಎಲ್ಲ ಹಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಪ್ರಗತಿಪರ ರಾಜಕೀಯಕ್ಕಾಗಿ ನಾನು ಸಾರ್ವಜನಿಕ ದೇಣಿಗೆ ಅಭಿಯಾನ ಮಾಡಿದೆ, ಆದರೆ ಅದು ವಿಫಲವಾಗಿದೆ ಎಂದರು.