ನವದೆಹಲಿ: ಹೆಚ್ಚು ಸಿಮ್ ಕಾರ್ಡ್ ಹೊಂದಿದವರ ಫೋನ್ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚಿಗೆ ದೂರಸಂಪರ್ಕ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಸಿಮ್ಗಳನ್ನು ಪರಿಶೀಲಿಸು ತ್ತಾರೆ. ಒಂಬತ್ತಕ್ಕಿಂತ ಹೆಚ್ಚು ಸಿಮ್ಗಳಿರುವುದು ಗಮನಕ್ಕೆ ಬಂದಲ್ಲಿ ಒಂದು ಸಿಮ್ ಹೊರತುಪಡಿಸಿ ಮಿಕ್ಕೆಲ್ಲ ಸಿಮ್ಗಳನ್ನು ನಿಷ್ಕ್ರಿಯ ಗೊಳಿಸಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ವಾಸಿಸುವ ಜನರಿಗೆ ಆರು ಸಿಮ್ಗಳನ್ನು ಮರುಪರಿಶೀಲನೆ ಮಾಡಲಾ ಗುತ್ತದೆ.
ಗ್ರಾಹಕರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಿಮ್ನ್ನು ಆಯ್ಕೆ ಮಾಡಲು ಹಾಗೂ ಉಳಿದ ಸಿಮ್ಗಳನ್ನು ನಿಷ್ಕ್ರಿಯ ಗೊಳಿಸಲು ಆಯ್ಕೆ ನೀಡಲಾಗುತ್ತದೆ.
ಒಬ್ಬ ಚಂದಾದಾರನು ವೈಯಕ್ತಿಕವಾಗಿ ಒಂಬತ್ತಕ್ಕಿಂತ ಹೆಚ್ಚು ಮೊಬೈಲ್ ಸಂಪರ್ಕ ಗಳನ್ನು ಹೊಂದಿದ್ದಲ್ಲಿ ಮರುಪರಿಶೀಲನೆ ಗಾಗಿ ಮೊಬೈಲ್ ಸಂಪರ್ಕಗಳನ್ನು ಫ್ಲ್ಯಾಗ್ ಮಾಡಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ.
ಸೈಬರ್ ಅಪರಾಧಗಳು, ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.