Friday, 22nd November 2024

ನ.26ರಂದು ಸಂವಿಧಾನ ದಿನ ಆಚರಣೆ: ರಾಷ್ಟ್ರಪತಿಗಳ ಅಧ್ಯಕ್ಷತೆ

ನವದೆಹಲಿ: ಭಾರತವು ನವೆಂಬರ್ 26ರಂದು ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ʻಸಂವಿಧಾನ ದಿನʼವನ್ನು ಅತ್ಯಂತ ಹುರುಪು ಮತ್ತು ಉತ್ಸಾಹ ದಿಂದ ಆಚರಿಸಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿ ಮುರಳೀಧರನ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರು ʻಆಜಾದಿ ಕಾ ಅಮೃತ ಮಹೋತ್ಸವʼದ ಅಡಿಯಲ್ಲಿ ʻಸಂವಿಧಾನ ದಿನʼ ಆಚರಣೆಗೆ ಸಿದ್ಧತೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು.

ಭಾರತದ ರಾಷ್ಟ್ರಪತಿಗಳು ನ.26ರಂದು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆಯುವ ʻಸಂವಿಧಾನ ದಿನʼ ಆಚರಣೆಯ ಅಧ್ಯಕ್ಷತೆ ವಹಿಸಲಿದ್ದು, ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು. ಈ ಕಾರ್ಯ ಕ್ರಮದಲ್ಲಿ ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಸಭಾಪತಿಗಳು, ಸಚಿವರು, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯವನ್ನು ಸಂಸತ್‌ ಟಿವಿ, ಡಿಡಿ ಹಾಗೂ ಇತರ ಟಿವಿ ವಾಹಿನಿ ಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ನಂತರ ಸಂವಿಧಾನದ ಪೀಠಿಕೆಯ ವಾಚನ ಕಾರ್ಯಕ್ರಮವಿದ್ದು ರಾಜಕೀಯ ಗಣ್ಯರಿಗೆ ಆಹ್ವಾನಿಸಲಾಗಿದೆ. ಸಂವಿಧಾನದ ಪೀಠಿಕೆಯ ವಾಚನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.

ಪ್ರಧಾನಮಂತ್ರಿಯವರು 2010ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ “ಸಂವಿಧಾನ ಗೌರವ ಯಾತ್ರೆ” ನಡೆಸಿದರು ಮತ್ತು 2015 ರಿಂದ ನವೆಂಬರ್ 26 ಅನ್ನು ʻಸಂವಿಧಾನ ದಿನʼ ಎಂದು ಘೋಷಿಸುವುದರ ಹಿಂದಿನ ಶಕ್ತಿಯೇ ಅವರು ಎಂದು ವಿವರಿಸಿದರು.