Saturday, 23rd November 2024

ಅಡುಗೆ ಎಣ್ಣೆ ದರ ಕೆ.ಜಿಗೆ ₹ 4ರವರೆಗೆ ಇಳಿಕೆ ?

ನವದೆಹಲಿ: ಮುಂಬರುವ ತಿಂಗಳುಗಳಲ್ಲಿ ಅಡುಗೆ ಎಣ್ಣೆ ದರವು ಪ್ರತಿ ಕೆ.ಜಿಗೆ ₹ 3 ರಿಂದ ₹ 4ರವರೆಗೆ ಇಳಿಕೆ ಆಗುವ ಸಾಧ್ಯತೆ ಇದೆ.

ಎಣ್ಣೆಕಾಳುಗಳ ದೇಶಿ ಉತ್ಪಾದನೆ ಗರಿಷ್ಠ ಮಟ್ಟದಲ್ಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರವು ಇಳಿಮುಖವಾಗಿದೆ.

ಈ ಕಾರಣಗಳಿಂದಾಗಿ, ದೇಶಿ ಮಾರುಕಟ್ಟೆಯಲ್ಲಿ ದರವು ಇನ್ನಷ್ಟು ಇಳಿಕೆ ಆಗುವ ಅಂದಾಜು ಮಾಡಲಾಗಿದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರವು ಆಮದು ಸುಂಕ ತಗ್ಗಿಸಿರುವುದರಿಂದ ಅಡುಗೆ ಎಣ್ಣೆ ದರವು ಒಂದು ತಿಂಗಳಿನಲ್ಲಿ ಕೆ.ಜಿಗೆ ₹ 8 ರಿಂದ ₹ 10ರವರೆಗೆ ಇಳಿಕೆ ಆಗಿದೆ.

ದೇಶದಲ್ಲಿ ಎಣ್ಣೆಗಳ ವಾರ್ಷಿಕ ಬೇಡಿಕೆ 2.2 ಕೋಟಿ ಟನ್‌ಗಳಿಂದ 2.25 ಕೋಟಿ ಟನ್‌ ಗಳಷ್ಟಿದೆ. ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಮೂಡಿಸಲು 1.3 ಕೋಟಿ ಟನ್‌ಗಳಿಂದ 1.5 ಕೋಟಿ ಟನ್‌ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.