Sunday, 15th December 2024

ಕೊರೊನಾ ಅಬ್ಬರ: ಮಧ್ಯಪ್ರದೇಶದಲ್ಲೂ ಲಾಕ್‌ಡೌನ್‌ ಜಾರಿ

ನವದೆಹಲಿ : ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗು ತ್ತಿದ್ದು, ಮಹಾರಾಷ್ಟ್ರದ ಬಳಿಕ ಮಧ್ಯಪ್ರದೇಶದಲ್ಲೂ ಲಾಕ್ ಡೌನ್ ಜಾರಿ ಮಾಡಲಾಗಿದೆ.

ಮಧ್ಯಪ್ರದೇಶದ ಇಂದೋರ್, ಭೋಪಾಲ್, ಜಬಲ್ ಪುರ್ ನಲ್ಲಿ ಇದೇಲಾಕ್ ಡೌನ್ ಜಾರಿಯಾಗಲಿದೆ. ಪ್ರತಿ ಭಾನುವಾರ ಲಾಕ್ ಡೌನ್ ಇರಲಿದ್ದು, ಮುಂದಿನ ಆದೇಶದವರೆಗೆ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಶನಿವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ ವರೆಗೆ ನೈಟ್ ಕರ್ಪ್ಯೂ ಇರಲಿದೆ. ಲಾಕ್ ಡೌನ್, ಕರ್ಪ್ಯೂ ನಡುವೆ ಜನರ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily