Sunday, 8th September 2024

ಸಂಸದ ಅನಂತ್​ಕುಮಾರ್​ ಹೆಗಡೆ ಸೇರಿ 17 ಮಂದಿಗೆ ಕರೋನಾ ಪಾಸಿಟಿವ್

ನವದೆಹಲಿ: ಇಂದು ಮುಂಗಾರು ಅಧಿವೇಶನ ಶುರುವಾದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರು ಸೇರಿದಂತೆ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ.

ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಂತ್​ಕುಮಾರ್​ ಹೆಗಡೆ ಸೇರಿದಂತೆ 17 ಮಂದಿಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ. ಸಂಸದ ಅನಂತ್​ಕುಮಾರ್​ ಅವರು ಕಳೆದ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ತಮಗೆ ಯಾವುದೇ ರೀತಿಯಲ್ಲಿಯೂ ಸೋಂಕಿನ ಲಕ್ಷಣಗಳು ಇಲ್ಲ. ಆದರೂ ಪಾಸಿಟಿವ್​ ಬಂದಿದೆ ಎಂದು ಅನಂತ್​ಕುಮಾರ್​ ಹೇಳಿದ್ದಾರೆ. ಸದ್ಯ ಇವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಈ ನಡುವೆಯೇ, ಅಧಿವೇಶನದಲ್ಲಿ ಹಾಜರು ಆಗಹೊರಟಿದ್ದ ಸಂಸದರನ್ನು ಪರೀಕ್ಷೆ ಮಾಡಿದಾಗ 16 ಮಂದಿಗೆ ಕರೊನಾ ಪಾಸಿಟಿವ್​ ಬಂದಿದೆ.

ಇವರ ಪೈಕಿ, ಅತ್ಯಧಿಕ ಕರೊನಾ ಪಾಸಿಟಿವ್​ ಬಂದಿರುವುದು ಬಿಜೆಪಿ ಸಂಸದರಿಗೆ. 12 ಮಂದಿ ಬಿಜೆಪಿ ಸಂಸದರು, ಇಬ್ಬರು ವೈಎಸ್​ಆರ್​ ಕಾಂಗ್ರೆಸ್ ಹಾಗೂ ತಲಾ ಒಬ್ಬರು ಶಿವ ಸೇನಾ, ಡಿಎಂಕೆ ಹಾಗೂ ಆರ್​ಎಲ್​ಪಿ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!