Friday, 22nd November 2024

ಛತ್ರಪತಿ ಶಿವಾಜಿ ಮಹಾರಾಜ್‌ ಪಟ್ಟಾಭಿಷೇಕ ದಿನ ಇಂದು: ಸಿಎಂ ಠಾಕ್ರೆ ಗೌರವ ನಮನ

ಮುಂಬೈ: ಶಿವಾಜಿ ಮಹಾರಾಜ್‌ ಅವರ ಪಟ್ಟಾಭಿಷೇಕದ ಗಳಿಗೆಯನ್ನು ಮಹಾರಾಷ್ಟ್ರದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರ ಗಳಲ್ಲಿ ಕೆತ್ತಲಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭಾನುವಾರ ಹೇಳಿದರು.

ಶಿವಾಜಿ ಮಹಾರಾಜ್‌ ಅವರಿಗೆ 1674ರ ಜೂನ್‌ 6ರಂದು ಸ್ವತಂತ್ರ ಮರಾಠ ಸಾಮ್ರಾಜ್ಯದ ಛತ್ರಪತಿಯನ್ನಾಗಿ ಪಟ್ಟಾಭಿಷೇಕ ಮಾಡ ಲಾಗಿತ್ತು. ಇದರ ಸ್ಮರಣಾರ್ಥ ಶಿವಾಜಿ ಮಹಾರಾಜ್‌ಗೆ ಗೌರವ ನಮನ ಸಲ್ಲಿಸಿದರು.

ಸಾಮಾನ್ಯವಾಗಿ ಈ ದಿನ ರಾಯಗಡ ಕೋಟೆಯಲ್ಲಿ ಸಾರ್ವಜನಿಕ ರ‍್ಯಾಲಿಗಳನ್ನು ನಡೆಸಲಾಗುತ್ತದೆ. ಆದರೆ ಕೋವಿಡ್‌ ಸಾಂಕ್ರಾ ಮಿಕದಿಂದಾಗಿ ಸತತ ಎರಡು ವರ್ಷಗಳ ಕಾಲ ಸಾರ್ವಜನಿಕ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ.

ರಾಜ್ಯಭಿಷೇಕ ಸಮಾರಂಭಕ್ಕೆ ಶಿವಾಜಿ ಮಹಾರಾಜ್‌ ಕಾಲದ ಅಪರೂಪದ ‘ಹೊನ’ ನಾಣ್ಯವು ಮೆರುಗು ನೀಡಲಿದೆ. ಈ ನಾಣ್ಯವು ಸ್ವರಾಜ್ಯ, ಸಾರ್ವಭೌಮತ್ವ ಮತ್ತು ಸಮೃದ್ಧಿಯ ಪ್ರತೀಕವಾಗಿದೆ’ ಎಂದು ಸಂಭಾಜಿರಾಜೆ ಅವರು ಟ್ವೀಟ್‌ ಮಾಡಿದ್ದಾರೆ.