Thursday, 12th December 2024

ಡಿ.9 ರಂದು ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಕಾರಿಡಾರ್‌ಗೆ ಶಂಕುಸ್ಥಾಪನೆ

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಡಿ.9 ರಂದು ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋದ ಉದ್ದೇಶಿತ ಕಾರಿಡಾರ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ತೆಲಂಗಾಣ ರಾಜ್ಯ ನಗರಾಭಿವೃದ್ಧಿ ಸಚಿವ ಕೆ ತಾರಕರಾಮ ರಾವ್ ಅವರು, ಮೈಂಡ್‌ ಸ್ಪೇಸ್ ಜಂಕ್ಷನ್‌ನಿಂದ ಶಂಶಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಅಂದಾಜು 6,250 ಕೋಟಿ ರೂಪಾಯಿ ವೆಚ್ಚದಲ್ಲಿ ಏರ್‌ ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಡಿ.9 ರಂದು ಮಾನ್ಯ ಸಿಎಂ ಕೆಸಿಆರ್ ಅವರು ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಘೋಷಿಸಲು ಸಂತೋಷವಾಗಿದೆ. ಮೈಂಡ್‌ಸ್ಪೇಸ್ ಜಂಕ್ಷನ್‌ನಿಂದ ಶಂಶಾಬಾದ್ ವಿಮಾನ ನಿಲ್ದಾಣದಿಂದ ಪ್ರಾರಂಭವಾಗುವ ಈ ಯೋಜನೆ ಯು 31 ಕಿಮೀ ಉದ್ದವಿರುತ್ತದೆ ಮತ್ತು ಅಂದಾಜು 6,250 ಕೋಟಿ ರೂಪಾಯಿ ವೆಚ್ಚ ವಾಗಲಿದೆ.

ಈ ಯೋಜನೆಯನ್ನು ಹೈದರಾಬಾದ್ ಏರ್‌ಪೋರ್ಟ್ ಮೆಟ್ರೋ ರೈಲು (ಎಚ್‌ಎಎಂಎಲ್) ನೋಡಿಕೊಳ್ಳಲಿದೆ ಎಂದು ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿ 31 ಕಿಮೀ ನಗರ ಮೆಟ್ರೋ ವಿಸ್ತರಣೆಗಾಗಿ ಹಾಗೂ ಬಿಎಚ್‌ಇಎಲ್‌ನಿಂದ ಲಕ್ಡಿಕಾಪುಲ್‌ವರೆಗೆ 26 ಕಿಮೀ ಮತ್ತು ನಾಗೋಲ್‌ನಿಂದ ಎಲ್‌ಬಿನಗರ 5 ಕಿಮೀ ಕಾಮಗಾರಿಗೆ ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮೆಟ್ರೋ ಕೇವಲ 20 ನಿಮಿಷಗಳಲ್ಲಿ ವಿಮಾನ ನಿಲ್ದಾಣವನ್ನು ಮುಖ್ಯ ನಗರಕ್ಕೆ ಸಂಪರ್ಕಿಸಲು ಯೋಜಿಸಲಾಗಿದೆ.