ಹರಿಯಾಣ : ಸಾಮಾನ್ಯವಾಗಿ ಎಮ್ಮೆಗಳ ಮಾರಾಟದ ಬೆಲೆ 25ರಿಂದ 30 ಸಾವಿರದ ತನಕ ಇರುತ್ತದೆ. ಆದರೆ ಭಾರತದ ಅತ್ಯಂತ ದುಬಾರಿ ಎಮ್ಮೆ(Costly Buffalo) ಬಗ್ಗೆ ನೀವು ಕೇಳಿದ್ದೀರಾ? ಇದರ ಬೆಲೆ 23ಕೋಟಿ ರೂಪಾಯಿಯಂತೆ. ಈ ಎಮ್ಮೆಯ ಬೆಲೆ ಎರಡು ರೋಲ್ಸ್ ರಾಯ್ಸ್ ಕಾರುಗಳು ಅಥವಾ ಹತ್ತು ಮರ್ಸಿಡಿಸ್ ಬೆಂಝ್ ವಾಹನಗಳಿಗಿಂತ ಹೆಚ್ಚಾಗಿದೆ. ಹಾಗಾದ್ರೆ ಇದು ಎಂತಹ ಎಮ್ಮೆ, ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ(Viral News).
ಹರಿಯಾಣದ ಸಿರ್ಸಾದಲ್ಲಿರುವ ಅನ್ಮೋಲ್ ಎಂಬ ಎಮ್ಮೆಯ ಬೆಲೆ 23 ಕೋಟಿ ರೂ. ಈ ಬೆಲೆಗೆ ನೋಯ್ಡಾದಲ್ಲಿ 20 ಐಷಾರಾಮಿ ಮನೆಗಳನ್ನು ಖರೀದಿಸಬಹುದು. 23 ಕೋಟಿ ಮೌಲ್ಯದ ಈ ಎಮ್ಮೆ, ಪ್ರತಿದಿನ 1500 ರೂ ಮೌಲ್ಯದ ಡ್ರೈ ಫ್ರುಟ್ಸ್ ತಿನ್ನುತ್ತದೆ ಮತ್ತು ಅದರ ವೀರ್ಯವನ್ನು ಕೂಡ ಮಾರಾಟ ಮಾಡಲಾಗುತ್ತದೆಯಂತೆ. ಅಲ್ಲದೇ ಈ ಎಮ್ಮೆಗೆ ಪ್ರತಿದಿನ 5 ಲೀಟರ್ ಹಾಲು, 4 ಕೆಜಿ ರಸಭರಿತ ದಾಳಿಂಬೆ, 30 ಬಾಳೆಹಣ್ಣುಗಳು, 20 ಪ್ರೋಟೀನ್ ಭರಿತ ಮೊಟ್ಟೆಗಳು ಮತ್ತು ಕಾಲು ಕೆಜಿ ಬಾದಾಮಿಯನ್ನು ತಿನ್ನಲು ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಈ ಎಮ್ಮೆಯನ್ನು ಪ್ರತಿದಿನ ಎರಡು ಬಾರಿ ಸ್ನಾನ ಮಾಡಿಸಿ ಸಾಸಿವೆ ಮತ್ತು ಬಾದಾಮಿ ಎಣ್ಣೆಯಿಂದ ಇದರ ದೇಹಕ್ಕೆ ಮಸಾಜ್ ಮಾಡಲಾಗುತ್ತದೆ.
ಅನ್ಮೋಲ್ ಎಮ್ಮೆಗೆ ಈ ಸೌಕರ್ಯ ಏಕೆಂದರೆ ಅದು ಹೆಚ್ಚು ಆದಾಯವನ್ನು ಸಹ ಗಳಿಸುತ್ತದೆಯಂತೆ. ಅದರ ವೀರ್ಯವು ಪ್ರತಿ ತಿಂಗಳು 4-5 ಲಕ್ಷ ರೂ.ಗೆ ಮಾರಾಟವಾಗುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ. ಜಗತ್ ಸಿಂಗ್ ಎಂಬುವವರು ಈ ಎಮ್ಮೆಯ ಒಡೆಯನಾಗಿದ್ದು, ಸಿಂಗ್ ಅನ್ಮೋಲ್ ಆಹಾರಕ್ಕಾಗಿ ತಿಂಗಳಿಗೆ 60,000 ರೂ.ಗಳನ್ನು ಹೂಡಿಕೆ ಮಾಡಿದರೆ, ವೀರ್ಯ ಮಾರಾಟವು ತಿಂಗಳಿಗೆ 4-5 ಲಕ್ಷ ರೂ.ಗಳ ಆದಾಯವನ್ನು ನೀಡುತ್ತದೆ.
ಈ ಎಮ್ಮೆಗೆ 8 ವರ್ಷ ವಯಸ್ಸಾಗಿದೆ ಎಂದು ಅದರ ಮಾಲೀಕ ತಿಳಿಸಿದ್ದಾರೆ. ಸಿಂಗ್ ಅನ್ಮೋಲ್ ಎಮ್ಮೆಯನ್ನು ತನ್ನ ಸಹೋದರನಂತೆ ಪರಿಗಣಿಸುತ್ತಾರೆ ಮತ್ತು ಸಹೋದರನನ್ನು ಎಂದಿಗೂ ಮಾರಾಟ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಬದಲಾಗಿ, ಅವರು ಎಮ್ಮೆಗಳ ತಳಿಯನ್ನು ಸುಧಾರಿಸಲು ಸಹಾಯ ಮಾಡಲು ಅನ್ಮೋಲ್ ವೀರ್ಯವನ್ನು ಮಾತ್ರ ಮಾರಾಟ ಮಾಡುತ್ತಾರೆ ಎನ್ನಲಾಗಿದೆ.