ಮೇಡನ್ ಫಾರ್ಮಸ್ಯೂಟಿಕಲ್ಸ್ ಲಿಮಿಟೆಡ್ ಉತ್ಪಾದಿಸುವ ಪ್ರೊಮೆಥಝೈನ್ ಓರಲ್ ಸೊಲ್ಯೂಶನ್ ಬಿಪಿ, ಕೋಫೆಕ್ಸ್‌ನಲಿನ್ ಬೇಬಿ ಕಫ್ ಸಿರಪ್ , ಮೇಕೋಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಎನ್ ಕೋಲ್ಡ್ ಸಿರಪ್ ಗಳನ್ನು ರಫ್ತು ಮಾಡಲು ಮಾತ್ರ ಕಂಪನಿ ಅನುಮತಿ ಪಡೆದಿದೆ. ಕಂಪನಿ ಈ ಔಷಧಿಗಳನ್ನು ಉತ್ಪಾದಿಸಿ ಕೇವಲ ಗ್ಯಾಂಬಿಯಾಗೆ ಮಾತ್ರ ರಫ್ತು ಮಾಡುತ್ತಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
“ದೇಶದಲ್ಲಿ ಇಂಥ ಉತ್ಪನ್ನಗಳನ್ನು ಬಳಕೆಗೆ ಬಿಡುಗಡೆ ಮಾಡುವ ಮುನ್ನ ಈ ಉತ್ಪನ್ನ ಗಳನ್ನು ಗುಣಮಟ್ಟದ ಮಾನದಂಡ ಗಳಲ್ಲಿ ಆಮದು ಮಾಡಿಕೊಳ್ಳುವ ದೇಶ ಪರೀಕ್ಷೆಗೆ ಒಳಪಡಿಸುವುದು ಮತ್ತು ದೃಢಪಡಿಸುವುದು ಸಾಮಾನ್ಯ ಕ್ರಮ” ಎಂದು ಹೇಳಿಕೆ ನೀಡಿದೆ.
“ಗ್ಯಾಂಬಿಯಾದಲ್ಲಿ ಮೃತಪಟ್ಟ 66 ಮಕ್ಕಳಲ್ಲಿ ಕಂಡುಬಂದ ತೀವ್ರ ಕಿಡ್ನಿ ಗಾಯಗಳಿಗೆ ಹಾಗೂ ಈ ನಾಲ್ಕು ಶೀತ ಮತ್ತು ಕೆಮ್ಮು ಔಷಧಿಗಳಿಗೆ ಸಂಬಂಧ ಇರುವ ಸಾಧ್ಯತೆ ಇದೆ” ಎಂದು ಡಬ್ಲ್ಯುಎಚ್‍ಓ ಮುಖ್ಯಸ್ಥ ಅಧನಾಮ್ ಗೇಬ್ರಿಯಾಸಸ್ ಹೇಳಿಕೆ ನೀಡಿದ್ದರು.