ಮುಂಬೈ: ನಿಷೇಧಿತ ಡ್ರಗ್ಸ್ ಅಂಶವಿರುವ ಕಫ್ ಸಿರಪ್ ನ 8640 ಬಾಟಲ್ ಗಳನ್ನು ಮಹಾರಾಷ್ಟ್ರದ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ ಅಧಿಕಾರಿ ಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಔಷಧ ಸಾಗಿಸುತ್ತಿರುವ ಬಗ್ಗೆ ದೊರೆತ ಸುಳಿವು ಆಧರಿಸಿ ಎನ್ ಸಿಬಿ ಥಾಣೆಯ ಆಗ್ರಾ-ಮುಂಬೈ ಹೆದ್ದಾರಿಯಲ್ಲಿ ಬಿವಾಂಡಿ ಬಳಿ ಕಾರನ್ನು ತಪಾಸಣೆ ನಡೆಸಿ ನಿಷೇಧಿತ ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ.