Thursday, 12th December 2024

ದೇವಾಲಯಗಳ ನಿರ್ವಹಣೆಗೆ ಹೊಸ ಕೋರ್ಸ್ ಆರಂಭ

ಮುಂಬೈ: ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಕೋರ್ಸ್ ಆರಂಭಿಸಲು ಮುಂಬೈ ವಿಶ್ವವಿದ್ಯಾಲಯ ಆಕ್ಸ್‌ಫರ್ಡ್‌ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.

ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಈ ಡಿಪ್ಲೊಮಾ ಕೋರ್ಸ್‌ ಕಲಿಯಬಹುದಾಗಿದೆ. ಇತರ ಡಿಪ್ಲೊಮಾ ಕೋರ್ಸ್‌ಗಳಂತೆಯೇ ದೇವಾಲಯ ನಿರ್ವಹಣೆ ಕೋರ್ಸ್‌ ಕೂಡಾ ಇರಲಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.

ಆಕ್ಸ್‌ಫರ್ಡ್‌ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ವಿಶ್ವವಿದ್ಯಾಲಯದ ಹಿಂದೂ ಅಧ್ಯಯನ ಕೇಂದ್ರ ಹಾಗೂ ಸಂಸ್ಕೃತ ವಿಭಾಗಗಳೂ ಜತೆಗೂಡಿವೆ.

ಈ ಒಡಂಬಡಿಕೆಯ ಜತೆಗೆ ಹಿಂದೂ ತತ್ವಜ್ಞಾನದ ಕುರಿತು ಸಮಗ್ರ ಅಧ್ಯಯನ ನಡೆಸಲು ಹೆಚ್ಚು ಅನುಕೂಲವಾಗಲಿದೆ ಎಂದು ಮುಂಬೈ ವಿಶ್ವವಿದ್ಯಾ ಲಯ ಹೇಳಿದೆ.