Saturday, 23rd November 2024

ಹಸಿರು ಪಟಾಕಿಗಳ ಬಳಸಲು ’ಸುಪ್ರೀಂ’ ಗ್ರೀನ್ ಸಿಗ್ನಲ್

ನವದೆಹಲಿ: ಹಸಿರು ಪಟಾಕಿಗಳು – ಕಡಿಮೆ ಮಾಲಿನ್ಯಕಾರಕ ವಸ್ತುಗಳನ್ನು ಬಳಸಿ ತಯಾರಿಸಿದ ಪಟಾಕಿ ಗಳನ್ನು ಪಶ್ಚಿಮ ಬಂಗಾಳದಲ್ಲಿ ಈ ವಾರದ ಹಬ್ಬದ ಋತುವಿನಲ್ಲಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

COVID-19 ಸಾಂಕ್ರಾಮಿಕದ ಮಧ್ಯೆ ವಾಯು ಮಾಲಿನ್ಯ ಉಂಟುವುದಕ್ಕೆ ಸಂಬಂಧಪಟ್ಟಂತೆ ಪಟಾಕಿಗಳನ್ನು ನಿಷೇಧಿಸಿದ್ದ ಕೋಲ್ಕತ್ತಾ ಹೈಕೋರ್ಟ್ ಆದೇಶ ವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ಅವರ ವಿಶೇಷ ಪೀಠವು ಆದೇಶ ನೀಡಿದೆ. ಪ.ಬಂಗಾಳ ರಾಜ್ಯದಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ, ಬಳಕೆ ಮತ್ತು ಖರೀದಿಯನ್ನು ನಿಷೇಧಿಸಿ ಹೈಕೋರ್ಟ್‌ನ ಆದೇಶದ ವಿರುದ್ಧ ಪಟಾಕಿ ತಯಾರಕರು ಸಲ್ಲಿಸಿದ ಮನವಿಯನ್ನು ಆಲಿಸಿ ಈ ಅಭಿಪ್ರಾಯವನ್ನು ತಿಳಿಸಿದೆ.

ಆರೋಗ್ಯಕರ ಮತ್ತು ಉಸಿರಾಡುವ ಗಾಳಿಯ ಜನರ ಹಕ್ಕನ್ನು ರಕ್ಷಿಸಲು ಮುಂಬರುವ ಹಬ್ಬಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧಿಸುವಂತೆ ಕೋರಿ ಪರಿಸರ ಕಾರ್ಯಕರ್ತೆ ರೋಶನಿ ಅಲಿ ಅವರು, ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಹೊರಡಿಸಿತ್ತು.