Friday, 22nd November 2024

Fact Check : ಕೇಂದ್ರ ಸರ್ಕಾರಕ್ಕೆ ಫ್ಯಾಕ್ಟ್‌ ಚೆಕ್‌ ಘಟಕ ತೆರೆಯಲು ಅವಕಾಶ ನೀಡಿದ ಐಟಿ ನಿಯಮ ರದ್ದು ಮಾಡಿದ ಬಾಂಬೆ ಹೈಕೋರ್ಟ್‌

Fack Check

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸುವ ನಕಲಿ ಸುದ್ದಿಗಳನ್ನು ನಿರ್ವಹಿಸುವುದಕ್ಕಾಗಿ ಫ್ಯಾಕ್ಟ್‌ ಚೆಕ್ Yಘಟಕಗಳನ್ನು (Fact Check) ತೆರೆಯಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದ ಐಟಿ ನಿಯಮಗಳಿಗೆ 2023ರ ತಿದ್ದುಪಡಿಗಳನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಈ ನಿಯಮಗಳು ಸಂವಿಧಾನದ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

“ಐಟಿ ನಿಯಮದ ತಿದ್ದುಪಡಿಗಳು ಭಾರತದ ಸಂವಿಧಾನದ 14 ಮತ್ತು 19 ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ನ್ಯಾಯಮೂರ್ತಿ ಅತುಲ್ ಚಂದುರ್ಕರ್ ಅವರ ಟೈಬ್ರೇಕರ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಡಾ.ನೀಲಾ ಗೋಖಲೆ ಅವರ ವಿಭಾಗೀಯ ಪೀಠವು 2024 ರ ಜನವರಿಯಲ್ಲಿ ವಿಭಜಿತ ತೀರ್ಪು ನೀಡಿದ ನಂತರ ಆ ಅರ್ಜಿಯು ಟೈ ಬ್ರೇಕರ್ ನ್ಯಾಯಪೀಠದ ಮುಂದೆ ಬಂದಿತ್ತು.

2023ರಲ್ಲಿ, ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021 (ಐಟಿ ನಿಯಮಗಳು 2021) ಅನ್ನು ತಿದ್ದುಪಡಿ ಮಾಡಿದೆ. ಸುಳ್ಳು ಆನ್‌ಲೈನ್‌ ಸುದ್ದಿಗಳನ್ನು ಗುರುತಿಸಲು ಎಫ್‌ಸಿಯುಗಳನ್ನು ರಚಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡುವ ನಿಯಮ 3 ಕಾನೂನು ಸಂಘರ್ಷಕ್ಕೆ ಒಳಗಾಗಿದೆ.

ಇದನ್ನೂ ಓದಿ: Tirupati Laddoo: ತಿರುಪತಿ ಲಡ್ಡುವಿಗಿದೆ 300 ವರ್ಷಗಳ ಇತಿಹಾಸ! ಇದರಲ್ಲಿ ಬಳಸುವ ಪದಾರ್ಥಗಳು ಏನೇನು?

ಈ ತಿದ್ದುಪಡಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 ರ ಅಧಿಕಾರವನ್ನು ಮೀರುತ್ತದೆ. ಸಮಾನತೆಯ ಹಕ್ಕು (ಅನುಚ್ಛೇದ 14) ಮತ್ತು ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯವನ್ನು ಅಥವಾ ಸಂವಿಧಾನದ ಯಾವುದೇ ಉದ್ಯೋಗ, ವ್ಯಾಪಾರ ಅಥವಾ ವ್ಯವಹಾರವನ್ನು ನಡೆಸುವ ಸ್ವಾತಂತ್ರ್ಯವನ್ನು (ಅನುಚ್ಛೇದ 19 (1) (ಎ) (ಜಿ)) ಉಲ್ಲಂಘಿಸಿವೆ ಎಂದು ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಕುನಾಲ್ ಕಮ್ರಾ ಸೇರಿದಂತೆ ಅರ್ಜಿದಾರರು ವಾದಿಸಿದ್ದರು.