Friday, 22nd November 2024

ಕೋವ್ಯಾಕ್ಸಿನ್ ಲಸಿಕೆ ಪ್ರತಿ ಡೋಸ್ ಗೆ 150 ರೂ. ಪೂರೈಸುವುದು ಸ್ಪರ್ಧಾತ್ಮಕ ಬೆಲೆಯಲ್ಲ: ಭಾರತ್ ಬಯೋಟೆಕ್

ನವದೆಹಲಿ : ಕೇಂದ್ರ ಸರ್ಕಾರಕ್ಕೆ ತನ್ನ ಕೋವ್ಯಾಕ್ಸಿನ್ ಲಸಿಕೆಯ ಪ್ರತಿ ಡೋಸ್ ನನ್ನು 150 ರೂಪಾಯಿಗಳಿಗೆ ನೀಡಲು ಸಾಧ್ಯ ವಾಗುತ್ತಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಬೆಲೆಗೆ ನೀಡುತ್ತಿದ್ದೇವೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.

ಖಾಸಗಿ ವಲಯದಲ್ಲಿ ಇತರೆ ಕೋವಿಡ್ ಲಸಿಕೆಗಳಿಗಿಂತ ಹೆಚ್ಚಿನ ಬೆಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಗಳು ಮಾರಾಟವಾಗುತ್ತಿರುವು ದರ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಆರೋಪಗಳಿಗೆ ಕಾರಣ ನೀಡುವುದರ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಂಡಿದೆ.

ಕೋವ್ಯಾಕ್ಸಿನ್ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ ಗೆ 150 ರೂ. ನಂತೆ ನೀಡುತ್ತಿರುವುದು ಸ್ಪರ್ಧಾತ್ಮಕ ಬೆಲೆಯಲ್ಲ. ಈ ಬೆಲೆಯಲ್ಲಿ ನಮಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಂಸ್ಥೆ ಹೇಳಿದೆ.

ಕೋವ್ಯಾಕ್ಸಿನ್‌ ನ ಲಸಿಕೆಯ ಹೆಚ್ಚಿನ ಬೆಲೆಯನ್ನು ಸಮರ್ಥಿಸಿಕೊಂಡ ಭಾರತ್ ಬಯೋಟೆಕ್ ಸಂಸ್ಥೆ, ಕಡಿಮೆ ಖರೀದಿ ಪ್ರಮಾಣ ಗಳು, ಹೆಚ್ಚಿನ ವಿತರಣಾ ವೆಚ್ಚಗಳು ಮತ್ತು ಮೂಲಭೂತ ವ್ಯವಹಾರ ಕಾರಣಗಳು ಲಸಿಕೆಯ ಹೆಚ್ಚಿನ ಬೆಲೆಗೆ ಕಾರಣವಾಗಿವೆ.  ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆಗೆ ಹಾಗೂ ಕ್ಲೀನಿಕಲ್ ಪ್ರಯೋಗಗಳಿಗಾಗಿ ಸಂಸ್ಥೆ 500 ಕೋಟಿ ಭರಿಸಿದೆ. ಉತ್ಪನ್ನದ ಅಭಿ ವೃದ್ಧಿಗೆ ಸಂಸ್ಥೆಯೇ ಪೂರ್ಣವಾಗಿ ಸಂಪನ್ಮೂಲಗಳ ಖರ್ಚು ವೆಚ್ಚಗಳನ್ನು ನೋಡಿಕೊಂಡಿದೆ. ಹಾಗಾಗಿ, ಖಾಸಗಿ ವಲಯಗಳಿಗೆ ಆ ಕಾರಣದಿಂದಲೇ ಹೆಚ್ಚಿನ ಬೆಲೆಯಲ್ಲಿ ನೀಡಲಾಗುತ್ತಿದೆ ಎಂದು ಹೇಳಿದೆ.

ಇತರೆ ರಾಷ್ಟ್ರಗಳ ಉತ್ಪಾದನಾ ಗುತ್ತಿಗೆ ಕೂಡ ಕಡಿಮೆಯಿದೆ. ಹಾಗಾಗಿ ಲಸಿಕೆಯನ್ನು ಅಷ್ಟು ಕಡಿಮೆ ಬೆಲೆಯಲ್ಲಿ ಪೂರೈಸಲು ಕಾರ್ಯ ಸಾಧ್ಯವಾಗುವುದಿಲ್ಲವೆಂದು ಸಂಸ್ಥೆ ಮಾಹಿತಿ ನೀಡಿದೆ.