ನವದೆಹಲಿ: ದೇಶದಲ್ಲಿ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನ. 30ರವರೆಗೂ ಕೋವಿಡ್ ಮಾರ್ಗಸೂಚಿಗಳನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ.
ಸೋಂಕಿನ ಪ್ರಮಾಣದಲ್ಲಿ ಇಳಿಮುಖ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ದೇಶವು ನಿರಾಳ ವಾಗಿದ್ದು ಅಕ್ಟೋಬರ್ 30ರಂದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 16,156 ಪ್ರಕರಣ ದಾಖಲಾಗಿದೆ.
ಮೊದಲ ಅಲೆಯು ನಿಯಂತ್ರಣಕ್ಕೆ ಬಂದ ಬಳಿಕ ಜನತೆ ಸೋಂಕಿನ ಅರಿವೇ ಇಲ್ಲದಂತೆ ವರ್ತಿಸಿದ ಪರಿಣಾಮ ಕೊರೊನಾ 2ನೇ ಅಲೆ ದೊಡ್ಡ ಹೊಡೆತವನ್ನೇ ನೀಡಿತ್ತು. 2ನೇ ಅಲೆಯಿಂದ ಸುಧಾರಿಸಿಕೊಂಡಿರುವ ಭಾರತ ಕಳೆದ ಅನೇಕ ದಿನಗಳಿಂದ ಕಡಿಮೆ ಸೋಂಕನ್ನು ವರದಿ ಮಾಡುತ್ತಿತ್ತು. ಆದರೆ ಇದೀಗ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತಿದೆ.