Sunday, 15th December 2024

Covid Lockdown: ಲಾಕ್‌ಡೌನ್‌ ಎಫೆಕ್ಟ್‌; ಹುಡುಗಿಯರಲ್ಲಿ ಮೆದುಳಿನ ವಯಸ್ಸಿನ ವೇಗ ಹೆಚ್ಚಳ!

Covid Lockdown

ಕೋವಿಡ್ ಸಾಂಕ್ರಾಮಿಕ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾಡಿದ್ದ ಲಾಕ್ ಡೌನ್ ನಿಂದ (Covid Lockdown) ಹುಡುಗರಿಗಿಂತ ಹರೆಯದ (teenager) ಹುಡುಗಿಯರ ಮೆದುಳಿನ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಇದು ಅವರ ಮೆದುಳಿನ ವಯಸ್ಸಿನ ವೇಗವನ್ನು (Brain Ageing) ಹೆಚ್ಚಿಸಿದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯು ಲಾಕ್ ಡೌನ್ ಬೀರಿದ ಪರಿಣಾಮಗಳಲ್ಲಿ ಹರೆಯದ ಹುಡುಗರು ಮತ್ತು ಹುಡುಗಿಯರ ನಡುವೆ ಉಂಟಾದ ಸಂಪೂರ್ಣ ವ್ಯತ್ಯಾಸಗಳನ್ನು ಬಹಿರಂಗಪಡಿಸಿದೆ.

ಕೋವಿಡ್ ಲಾಕ್‌ಡೌನ್‌ ಹದಿಹರೆಯದವರಲ್ಲಿ ಅಕಾಲಿಕ ಮೆದುಳಿನ ವಯಸ್ಸಿಗೆ ಕಾರಣವಾಗಿದೆ. ಹುಡುಗರಿಗಿಂತ ಹದಿಹರೆಯದ ಹುಡುಗಿಯರಲ್ಲಿ ಮೆದುಳಿನ ವಯಸ್ಸಿನ ವೇಗವನ್ನು ಇದು ಹೆಚ್ಚಿಸಿದೆ. ಇದರಿಂದ ಹುಡುಗಿಯರಲ್ಲಿ ಹೆಚ್ಚು ಗಮನಾರ್ಹ ಬದಲಾವಣೆಗಳು ಕಂಡು ಬಂದಿವೆ ಎಂದು ವರದಿ ಹೇಳಿದೆ. ಸಾಮಾನ್ಯವಾಗಿ ಹದಿಹರೆಯದ ವರ್ಷಗಳೆಂದರೆ ಮಕ್ಕಳಿಂದ ಪ್ರೌಢಾವಸ್ಥೆಗೆ ಪರಿವರ್ತನೆಯಾಗುವ ಸಮಯವೆಂದು ಗುರುತಿಸಲ್ಪಟ್ಟಿದೆ. ಮಾನವ ಬೆಳವಣಿಗೆಯಲ್ಲಿ ಈ ಹಂತವು ನಿರ್ಣಾಯಕವಾಗಿದ್ದು, ಕೋವಿಡ್ -19 ಸಾಂಕ್ರಾಮಿಕ ಇದರ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.

ಕೋವಿಡ್ 19ನಿಂದಾದ ಸಾಮಾಜಿಕ ನಿರ್ಬಂಧಗಳು ಈ ಚಟುವಟಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಮಾನವ ಅಭಿವೃದ್ಧಿಯ ಅತ್ಯಂತ ದುರ್ಬಲವಾದ ಹಂತದಲ್ಲಿ ವಿಶೇಷವಾಗಿ ಹದಿಹರೆಯದ ಹುಡುಗಿಯರಲ್ಲಿ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರಿದೆ.

Covid Lockdown

ಕೋವಿಡ್ ಲಾಕ್‌ಡೌನ್‌ಗಳನ್ನು ಎದುರಿಸಿದ ಹದಿಹರೆಯದವರಲ್ಲಿ ಅಕಾಲಿಕವಾಗಿ ಮೆದುಳಿನ ವಯಸ್ಸಿನಲ್ಲಿ ಹೆಚ್ಚಳವಾಗಿರುವುದನ್ನು 2022ರಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ. ಎಂಆರ್‌ಐ ಸ್ಕ್ಯಾನ್‌ಗಳಿಂದ ಲಾಕ್‌ಡೌನ್‌ಗಳ ಅನಂತರ ಸರಾಸರಿಯಾಗಿ ಹುಡುಗಿಯರ ಮೆದುಳು ನಿರೀಕ್ಷೆಗಿಂತ ಸುಮಾರು 4.2 ವರ್ಷಗಳಷ್ಟು ಹಳೆಯದಾಗಿ ಕಾಣಿಸಿದರೆ, ಹುಡುಗರ ಮೆದುಳು ಸರಾಸರಿ 1.4 ವರ್ಷಗಳಷ್ಟು ಹಳೆಯದಾಗಿ ತೋರಿಸಿದೆ.

ಏನು ಪರಿಣಾಮ?

ಹರೆಯದ ಹುಡುಗಿಯರಲ್ಲಿ ಆಗಿರುವ ಈ ಬದಲಾವಣೆಗಳ ನಿಖರ ಪರಿಣಾಮಗಳ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ. ಮಾನಸಿಕ ಆರೋಗ್ಯ ಮತ್ತು ಅರಿವಿನ ಸಾಮರ್ಥ್ಯಗಳ ಮೇಲೆ ಅದರ ಪರಿಣಾಮ ಹೇಗಿರಬಹುದು ಎನ್ನುವ ಆತಂಕ ಕೂಡ ಹೆಚ್ಚಾಗಿದೆ. ಹೀಗಾಗಿ ಇದನ್ನು ತಿಳಿದುಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎನ್ನುತ್ತಾರೆ ಸಂಶೋಧಕರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಧಿಸಲಾದ ಲಾಕ್‌ಡೌನ್‌ಗಳ ಕಾರಣದಿಂದಾಗಿ ಸಾಮಾಜಿಕ ಪ್ರತ್ಯೇಕತೆಯು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಿರುವುದು ಸ್ಪಷ್ಟವಾಗಿದೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಇದು ಹೆಚ್ಚು ಪರಿಣಾಮವನ್ನು ಬೀರಿದೆ. ಲಾಕ್‌ಡೌನ್‌ಗಳ ಮೊದಲು ಮತ್ತು ಅನಂತರ ಹದಿಹರೆಯದವರಲ್ಲಿ ಆದ ವ್ಯತ್ಯಾಸಗಳ ಮೇಲೆ ಕೇಂದ್ರೀಕೃತವಾಗಿ ಎಂಆರ್‌ಐ ರಚನಾತ್ಮಕ ಡೇಟಾವನ್ನು ಸಂಗ್ರಹಿಸಿ ವರದಿಯನ್ನು ತಯಾರಿಸಲಾಗಿದೆ ಎನ್ನುತ್ತಾರೆ ಅಧ್ಯಯನದ ಲೇಖಕರು.

Job Guide: ಸೈಂಟಿಸ್ಟ್‌ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌: ಇಲ್ಲಿದೆ ಹೊಸ ಟೈಮ್‌ ಟೇಬಲ್‌

ದೀರ್ಘಕಾಲದ ಒತ್ತಡ ಅಥವಾ ಬೆಳವಣಿಗೆಯ ಸಮಯದಲ್ಲಿ ಪ್ರತಿಕೂಲತೆಯ ಪರಿಣಾಮದೊಂದಿಗೆ ಮೆದುಳಿನ ಬೆಳವಣಿಗೆಯ ಅಂಶಗಳನ್ನು ಇದರಲ್ಲಿ ದಾಖಲಿಸಲಾಗಿದೆ. ಇಂದಿನ ಯುವಜನರು ಎದುರಿಸುತ್ತಿರುವ ಅಭಿವೃದ್ಧಿ ಸವಾಲುಗಳನ್ನು ಪರಿಹರಿಸಲು ನಿರಂತರ ಬೆಂಬಲದ ಅಗತ್ಯವನ್ನು ಈ ಅಧ್ಯಯನದ ಫಲಿತಾಂಶಗಳು ಒತ್ತಿ ಹೇಳಿವೆ ಎನ್ನುತ್ತಾರೆ ಲೇಖಕರು.