Saturday, 23rd November 2024

ʻಸಾಧ್ವಿ ಪ್ರಗ್ಯ ಸಿಂಗ್ ಠಾಕೂರ್ʼಗೆ ಕೋವಿಡ್ ಪಾಸಿಟಿವ್ ದೃಢ

ನವದೆಹಲಿ: ಲೋಕಸಭಾ ಸಂಸದೆ ʻಸಾಧ್ವಿ ಪ್ರಗ್ಯ ಸಿಂಗ್ ಠಾಕೂರ್ʼಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಮಧ್ಯಪ್ರದೇಶದ ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯ ಸಿಂಗ್ ಠಾಕೂರ್ ಇಂದು ಟ್ವಿಟ್ಟರ್ ಮೂಲಕ ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವ ಬಗ್ಗೆ ತಿಳಿಸಿ ದ್ದಾರೆ. ತಮ್ಮ ಸಂಪರ್ಕಕ್ಕೆ ಬಂದವರು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಂಸತ್ತಿನ ಸುಮಾರು 875 ಉದ್ಯೋಗಿಗಳು ಕರೋನ ಪಾಸಿಟಿವ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.