Friday, 22nd November 2024

ಕರೋನಾ ಪ್ರಕರಣ ಹೆಚ್ಚಳ: 3 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ

ವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಳ ವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ 3 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿ ಹಲವು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.

ಹರಿಯಾಣ ಮತ್ತು ಪುದುಚೇರಿ ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ಕೇರಳದಲ್ಲಿ ಗರ್ಭಿಣಿಯರು ಹಾಗೂ ರೋಗಪೀಡಿತರು, ವೃದ್ಧರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದ್ದು, ಇವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

ದೇಶದಲ್ಲಿ ಶೀಘ್ರವೇ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ ಇದು 4 ನೇ ಅಲೆ ಉಂಟಾಗುವುದಿಲ್ಲ. ಕೋವಿಡ್ ಸಾಂಕ್ರಾ ಮಿಕ ಈಗಾಗಲೇ ಎಂಡೆಮಿಕ್ ಹಂತಕ್ಕೆ ತಲುಪಿದ್ದು, ಲಕ್ಷಣಗಳು ತೀರಾ ಸೌಮ್ಯವಾಗಿವೆ. ಕೇವಲ ಕೆಮ್ಮು, ನೆಗಡಿಗೆ ಸೀಮಿತವಾಗಿದೆ. ಹೀಗಾಗಿ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಹೇಳಿದ್ದಾರೆ.