Thursday, 12th December 2024

ಜೂನ್‌ನಲ್ಲಿ 10 ಕೋಟಿ ಕೋವಿಶೀಲ್ಡ್ ಡೋಸ್ ಉತ್ಪಾದನೆ ಸಾಧ್ಯ: ಎಸ್‌ಐಐ

ನವದೆಹಲಿ: ಮುಂಬರುವ ಜೂನ್‌ ತಿಂಗಳಲ್ಲಿ ಒಂಬತ್ತರಿಂದ 10 ಕೋಟಿ ಕೋವಿಶೀಲ್ಡ್ ಡೋಸ್ ಗಳನ್ನು ಉತ್ಪಾದನೆ ಮಾಡಲು ಮತ್ತು ಪೂರೈಸಲು ಸಾಧ್ಯವಾಗಲಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಾಂಕ್ರಾಮಿಕ ರೋಗದಿಂದಾಗಿ ವಿವಿಧ ಸವಾಲುಗಳ ನಡುವೆಯೂ ತನ್ನ ಸಿಬ್ಬಂದಿ ವರ್ಗ, ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

“ಮೇ ತಿಂಗಳಲ್ಲಿ ಉತ್ಪಾದನಾ ಸಾಮರ್ಥ್ಯ 6.5 ಕೋಟಿ ಡೋಸೇಜ್‌, ಇದಕ್ಕೆ ಹೋಲಿಸಿದರೆ ಜೂನ್’ನಲ್ಲಿ ಲಸಿಕೆಯ ಒಂಬತ್ತರಿಂದ 10 ಕೋಟಿ ಡೋಸ್‌ ಗಳನ್ನು ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ಎಸ್‌ಐಐ ನಲ್ಲಿನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತವು ಪ್ರಸ್ತುತ ತನ್ನ ಕೋವಿಡ್ -19 ರೋಗನಿರೋಧಕ ಕಾರ್ಯಕ್ರಮದಲ್ಲಿ ಎಸ್‌ಐಐ ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸೀನ್ ಲಸಿಕೆಗಳನ್ನು ಬಳಸುತ್ತಿದೆ.