Friday, 22nd November 2024

ಪಾಲಕ್ಕಾಡ್‌ನಲ್ಲಿ ಸಿಪಿಐ (ಎಂ) ಮುಖಂಡನ ಹತ್ಯೆ

ತಿರುವನಂತಪುರಂ: ಕೇರಳದ ಪಾಲಕ್ಕಾಡ್‌ನ ಮರುತರೋಡ್‌ನ ಸಿಪಿಐ (ಎಂ) ಸ್ಥಳೀಯ ಸಮಿತಿ ಸದಸ್ಯರೊಬ್ಬರನ್ನು ಭಾನುವಾರ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಶಾಜಹಾನ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಶಾಜಹಾನ್ ಮೇಲೆ 5 ರಿಂದ 8 ಜನರ ಗುಂಪು ಅವರ ಮನೆಯ ಬಳಿಯೇ ದಾಳಿ ಮಾಡಿ ಕೊಲೆ ಮಾಡಿದೆ ಎಂದಿದೆ.

 

ಎಂಟು ಜನರ ಗುಂಪು ಶಾಜಹಾನ್ ಅವರ ಮನೆಯ ಬಳಿಗೆ ಬಂದು ದಾಳಿ ಮಾಡಿದೆ. ಆತ ರಾಜಕೀಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಪ್ರಕರಣದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ” ಎಂದು ಪೊಲೀಸರು ತಿಳಿಸಿದ್ದಾರೆ.

ಸಿಪಿಐ(ಎಂ)ನ ಮರ್ತುತಾ ರಸ್ತೆಯ ಸ್ಥಳೀಯ ಸಮಿತಿ ಸದಸ್ಯ ಕಾಮ್ರೇಡ್ ಶಾಜಹಾನ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನದಂದು ಕಡಿದು ಹತ್ಯೆ ಮಾಡ ಲಾಗಿದೆ. ರೆಡ್ ಸೆಲ್ಯೂಟ್ ಕಾಮ್ರೇಡ್ ಶಾಜಹಾನ್. ನಿಮ್ಮ ಹೋರಾಟ ಮುಂದುವರಿಯು ತ್ತದ” ಎಂದು ಸಿಪಿಐ(ಎಂ) ಸಂತಾಪ ವ್ಯಕ್ತಪಡಿಸಿದೆ.

ಏಪ್ರಿಲ್ 19 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿಯೇ ತನ್ನ ತಂದೆಯ ಎದುರೇ ಸುಬೈರ್ ಎಂಬ ಪಿಎಫ್‌ಐ ನಾಯಕನನ್ನು ಹತ್ಯೆ ಮಾಡಲಾ ಗಿತ್ತು.

ಪಿಎಫ್‌ಐ ನಾಯಕನ ಹತ್ಯೆಯಾದ 24 ಗಂಟೆಯೊಳಗೆ ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಹಿಂದೆ ಪಿಎಫ್‌ಐನ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು.