ಮಂಗಳೂರು: ಕೇರಳ- ಕರ್ನಾಟಕ ಗಡಿಭಾಗದ ಕಾಸರಗೋಡಿನಲ್ಲಿರುವ (Kasaragod) ದೇವಸ್ಥಾನವೊಂದರ ಉತ್ಸವದ (Temple Festival) ವೇಳೆ ನಡೆದ ಪಟಾಕಿ ಅವಘಡದಲ್ಲಿ(crackers accident) 150 ಮಂದಿಗೆ ಗಾಯವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ ಎಂಬುದು ತಿಳಿದುಬಂದಿದೆ.
ನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 150 ಮಂದಿಗೆ ಗಾಯವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿ ಕಿಡಿ ಪಟಾಕಿಗಳಿಗೆ ಸಿಡಿದು ಎಲ್ಲವೂ ಏಕಕಾಲಕ್ಕೆ ಹೊತ್ತಿ ಸ್ಪೋಟಗೊಂಡಿದೆ ಎಂಬುದು ತಿಳಿದುಬಂದಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆ ಹಾಗೂ ನೀಲೇಶ್ವರ ಮತ್ತು ಕಾಞಂಗಾಡ್ನ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ಪೈಕಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಸರಗೋಡು ಸಮೀಪದ ಈ ದೇವಸ್ಥಾನ ಪ್ರಖ್ಯಾತವಾಗಿದ್ದು, ಕರ್ನಾಟಕದಿಂದಲೂ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಾರೆ.
ಇದನ್ನೂ ಓದಿ: Army Accident : ಜಮ್ಮು- ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತ; ಯೋಧ ಸಾವು, 13 ಮಂದಿಗೆ ಗಾಯ