Wednesday, 23rd October 2024

Durga Puja Credit Card Rewards: ಹಬ್ಬದ ಋತುವಿನಲ್ಲಿ ಶಾಪಿಂಗ್; ಕ್ರೆಡಿಟ್ ಕಾರ್ಡ್ ಬಳಸಿ ಬಹುಮಾನ ಗೆಲ್ಲಲು ಇಲ್ಲಿದೆ ಟಿಪ್ಸ್

Credit Card

ಹಬ್ಬದ ಸಂದರ್ಭದಲ್ಲಿ ಶಾಪಿಂಗ್ (Durga Puja Credit Card Rewards) ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ನವರಾತ್ರಿ (Navaratri) ಹಬ್ಬ ನಡೆಯುತ್ತಿದ್ದು, ಜೊತೆಜೊತೆಗೆ ದೀಪಾವಳಿಯು (deepavali) ಕೂಡ ಹತ್ತಿರವಿರುವುದರಿಂದ ಈಗಾಗಲೇ ತಯಾರಿ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ. ಶಾಪಿಂಗ್ ವೇಳೆ ಅದರಲ್ಲೂ ಮುಖ್ಯವಾಗಿ ಹಬ್ಬದ ಶಾಪಿಂಗ್ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ (Credit Card) ಬಳಸುವುದು ಅನೇಕ ಸಂದರ್ಭಗಳಲ್ಲಿ ಲಾಭದಾಯಕವಾಗಿರುತ್ತದೆ.

ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಹಬ್ಬದ ಸಂದರ್ಭದಲ್ಲಿ ಶೇ. 10-15ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಇದಕ್ಕಾಗಿ ಬ್ಯಾಂಕ್‌, ಇ-ಕಾಮರ್ಸ್ ಸೈಟ್‌ಗಳಿಂದ ವಿಶೇಷ ಪ್ರಚಾರವನ್ನೂ ನಡೆಸುತ್ತದೆ, ಬಹುಮಾನವನ್ನೂ ಘೋಷಿಸುತ್ತದೆ. ಪ್ರಮುಖ ಇ-ಕಾಮರ್ಸ್ ಸೈಟ್‌ಗಳ ಸಹಯೋಗದೊಂದಿಗೆ ಬ್ಯಾಂಕ್‌ಗಳು ನೀಡುವ ಈ ರಿಯಾಯಿತಿಯ ಲಾಭವನ್ನು ಪಡೆದು ಹಬ್ಬದ ಸಂಭ್ರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ಹಬ್ಬದ ಶಾಪಿಂಗ್ ಮಾಡಬೇಕಿದ್ದರೆ ದೀಪಾವಳಿ ಮಾರಾಟ, ಬಿಗ್ ಬಿಲಿಯನ್ ಡೇ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

ಸೀಮಿತ ಸಮಯದ ಹಲವು ಕೊಡುಗೆಗಳು ಕೆಲವೊಂದು ಜನಪ್ರಿಯ ಸೈಟ್ ಗಳಲ್ಲಿ ಶೇ. 10ರಿಂದ 15ರವರೆಗೆ ರಿಯಾಯಿತಿಗಳನ್ನು ಒದಗಿಸುತ್ತವೆ. ಹಬ್ಬದ ಮಾರಾಟದ ಸಂದರ್ಭದಲ್ಲಿ ಹೆಚ್ಚಿನ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಅನುವು ಮಾಡಿಕೊಡುವ ಕಾರ್ಡ್‌ಗಳ ಮೇಲೆ ಗಮನ ಹರಿಸುವುದು ಉತ್ತಮ ಎನ್ನುತ್ತಾರೆ ವಾಣಿಜ್ಯ ಪರಿಣತರು.

Credit Card

ಕ್ರೆಡಿಟ್ ಕಾರ್ಡ್ ಲಾಭ ಪಡೆಯುವುದು ಹೇಗೆ?

ಹಬ್ಬದ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಪ್ರಯೋಜನಗಳನ್ನು ಪಡೆಯಲು ಕೆಲವೊಂದು ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

ಕೆಲವು ಕಾರ್ಡ್‌ಗಳು ಆನ್‌ಲೈನ್ ಖರೀದಿಗಳಿಗೆ ಉತ್ತೇಜನ ನೀಡುತ್ತದೆ. ಇದು ಇ- ಕಾಮರ್ಸ್ ಮಾರಾಟದ ಸಮಯದಲ್ಲಿ ಪ್ರಯೋಜನಕಾರಿಯಾಗಿದೆ.

ಧನ್‌ತೇರಾಸ್ ಸಂದರ್ಭದಲ್ಲಿ ಚಿನ್ನ ಖರೀದಿಗೆ ಯೋಚಿಸುತ್ತಿದ್ದರೆ ಆಭರಣ ಖರೀದಿಗೆ ಬಹುಮಾನ ನೀಡುವ ಕಾರ್ಡ್‌ಗಳನ್ನು ಹುಡುಕಿ. ಚಲನಚಿತ್ರದ ಟಿಕೆಟ್‌, ಮನೋರಂಜನೆಗಾಗಿ ವಿಶೇಷ ಕೊಡುಗೆಗಳನ್ನು ಘೋಷಿಸುವ ಕಾರ್ಡ್‌ಗಳನ್ನು ಪರಿಗಣಿಸಿ. ಯಾಕೆಂದರೆ ಹಬ್ಬದ ಸಂದರ್ಭದಲ್ಲಿ ಹೊಚ್ಚಹೊಸ ಚಲನಚಿತ್ರಗಳು ಬಿಡುಗಡೆಯಾಗುತ್ತವೆ. ಇನ್ನು ಕೆಲವು ಪ್ರೀಮಿಯಂ ಕಾರ್ಡ್‌ಗಳು ಪೂಜಾ ಸೇವೆಗಳನ್ನು ಕಾಯ್ದಿರಿಸುವುದಕ್ಕಾಗಿ ಅಥವಾ ದತ್ತಿ ದೇಣಿಗೆಗಳನ್ನು ನೀಡುವುದಕ್ಕಾಗಿ ಬಹುಮಾನಗಳನ್ನು ನೀಡುತ್ತವೆ.

ಅನೇಕ ಬ್ಯಾಂಕುಗಳು ತಮ್ಮ ಕಾರ್ಡ್‌ಗಳ ವಿಶೇಷ ಆವೃತ್ತಿಗಳನ್ನು ನವೀಕರಿಸಿ ಬಿಡುಗಡೆ ಮಾಡುತ್ತವೆ. ಜನಪ್ರಿಯ ಆನ್‌ಲೈನ್ ಮಾರುಕಟ್ಟೆಗಳಲ್ಲಿ ತ್ವರಿತ ರಿಯಾಯಿತಿಗಳ ಮೇಲೆ ಇದರ ಮೌಲ್ಯಗಳು ಸಾಕಷ್ಟು ಬದಲಾವಣೆ ಮಾಡಬಹುದು.

ಹಬ್ಬದ ಸಂದರ್ಭದಲ್ಲಿ ಬಹುಮಾನದ ಬಗ್ಗೆ ಗಮನ ನೀಡುತ್ತಾ ಬಜೆಟ್ ಮೀರಿ ಖರ್ಚು ಮಾಡಲು ಹೋಗಬೇಡಿ. ಬಜೆಟ್ ನಲ್ಲಿ ಅತೀ ಹೆಚ್ಚು ಲಾಭ ಕೊಡಬಲ್ಲ ಕಾರ್ಡ್‌ಗಳ ಬಗ್ಗೆ ಗಮನ ಹರಿಸಿ. ಬುದ್ಧಿವಂತಿಕೆಯಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ. ಇದು ಉತ್ತಮ ಲಾಭ ತಂದುಕೊಡುತ್ತದೆ.

ಹಬ್ಬದ ಋತುವಿನಲ್ಲಿ ಕ್ರೆಡಿಟ್ ಕಾರ್ಡ್‌ಗಳ ಗರಿಷ್ಠ ಪ್ರಯೋಜನ ಪಡೆಯಿರಿ. ಇದಕ್ಕಾಗಿ ಶಾಪಿಂಗ್ ನಲಿ ಸ್ಮಾರ್ಟ್ ತಂತ್ರಗಳ ಬಗ್ಗೆ ಯೋಚಿಸಿ. ರಜಾದಿನಗಳಲ್ಲಿ ಶಾಪಿಂಗ್, ಊಟೋಪಹಾರ, ಪ್ರವಾಸ, ಕ್ಯಾಶ್‌ಬ್ಯಾಕ್, ರಿವಾರ್ಡ್ ಪಾಯಿಂಟ್‌ಗಳಂತಹ ಹಬ್ಬದ ಕೊಡುಗೆಗಳ ಬಗ್ಗೆ ನೋಡಿಕೊಳ್ಳಿ.

Shaktikanta Das: ಸೂಕ್ಷ್ಮ, ಸಣ್ಣ ಉದ್ಯಮಗಳ ಫಾರ್‌ಕ್ಲೋಸರ್‌ ಶುಲ್ಕ ಹಿಂಪಡೆಯಲು ಆರ್‌ಬಿಐ ನಿರ್ಧಾರ

ಸೀಮಿತ ಸಮಯದ ಆಫರ್‌ಗಳ ವೇಳೆಯೇ ಶಾಪಿಂಗ್ ಬಗ್ಗೆ ಯೋಚಿಸಿ. ಎಲೆಕ್ಟ್ರಾನಿಕ್ಸ್, ಫ್ಯಾಷನ್ ಅಥವಾ ದಿನಸಿಗಳಂತಹ ವರ್ಗಗಳಲ್ಲಿ ಖರ್ಚು ಮಾಡಲು ಕೆಲವು ಕಾರ್ಡ್‌ಗಳು ವಿಶೇಷ ಕೊಡುಗೆಗಳನ್ನು ನೀಡುತ್ತವೆ. ಕ್ರೆಡಿಟ್ ಮಿತಿಯನ್ನು ಮೀರುವುದನ್ನು ತಪ್ಪಿಸಲು ಖರ್ಚುಗಳ ಮೇಲೆಯೂ ನಿಗಾ ಇರಲಿ ಎನ್ನುತ್ತಾರೆ ಮಾರಾಟ ತಜ್ಞರು.