Sunday, 8th September 2024

4 ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಗೆ ಆರ್‌.ಬಿ.ಐ ದಂಡ

ನವದೆಹಲಿ: ಸಿಬಿಲ್, ಈಕ್ವಿಫ್ಯಾಕ್ಸ್ ಸೇರಿದಂತೆ 4 ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಗೆ ಭಾರ ತೀಯ ರಿಸರ್ವ್ ಬ್ಯಾಂಕ್ ತಲಾ 25 ಲಕ್ಷ ರೂ.ನಷ್ಟು ದಂಡ ವಿಧಿಸಿದೆ.

ಕ್ರೆಡಿಟ್ ಮಾಹಿತಿ ಕಂಪನಿಗಳ ಕಾಯ್ದೆಯ ಕೆಲ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ನಾಲ್ಕು ಏಜೆನ್ಸಿಗಳಿಗೆ ದಂಡ ಹಾಕಲಾಗಿದೆ. ಟ್ರಾನ್ಸ್​ಯೂನಿಯನ್ ಸಿಬಿಲ್, ಸಿಆರ್​ಐಎಫ್ ಹೈಮಾರ್ಕ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್ , ಎಕ್ಸ್​ಪೀರಿಯನ್ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿ ಮತ್ತು ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್ ಸಂಸ್ಥೆಗಳಿಗೆ ದಂಡ ಹಾಕುವ ಮುನ್ನ , ಕಾರಣ ಕೇಳಿ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿತ್ತು .

ವಿಧಿಸಲಾದ ದಂಡ

  1. ಟ್ರಾನ್ಸ್​ಯೂನಿಯನ್ ಸಿಬಿಲ್: 26 ಲಕ್ಷ ರೂ
  2. ಸಿಆರ್​ಐಎಫ್ ಹೈ ಮಾರ್ಕ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್: 25.75 ಲಕ್ಷ ರೂ
  3. ಎಕ್ಸ್​ಪೀರಿಯನ್ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿ: 24.75 ಲಕ್ಷ ರೂ
  4. ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್: 24.25 ಲಕ್ಷ ರೂ

ಸಿಬಿಲ್, ಸಿಆರ್​ಐಎಫ್ ಮತ್ತು ಈಕ್ವಿಫ್ಯಾಕ್ಸ್ ಕಂಪನಿಗಳು ಕೆಲ ಕ್ರೆಡಿಟ್ ಮಾಹಿತಿಯನ್ನು ಸಮರ್ಪಕವಾಗಿ ಇಟ್ಟುಕೊಂಡಿಲ್ಲ ಎಂಬುದು ವಿವಿಧ ದಾಖಲೆಗಳ ಪರಿಶೀಲನೆಯಿಂದ ತಿಳಿದು ಬಂದಿದೆ ಎಂದು ಆರ್​ಬಿಐ ಆರೋಪಿಸಿದೆ. ಕೆಲ ಸಾಲಗಾರರು ತಮಗೆ ನೀಡಲಾದ ಕ್ರೆಡಿಟ್ ರೇಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನೀಡಲಾದ ದೂರುಗಳ ವಿಚಾರದಲ್ಲೂ ಈ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿವೆ.

Leave a Reply

Your email address will not be published. Required fields are marked *

error: Content is protected !!