ಪುಣೆ: ದೀಪಾವಳಿ (deepavali) ಪ್ರಯುಕ್ತ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ವ್ಯಕ್ತಿ ಮೇಲೆ ವೇಗವಾಗಿ ಬಂದ ಕಾರೊಂದು ಹರಿದು (car accident) ಮೃತಪಟ್ಟ (Crime News) ಘಟನೆ ಪುಣೆ ಜಿಲ್ಲೆಯ ಪಿಂಪ್ರಿ- ಚಿಂಚ್ವಾಡ್ ಪ್ರದೇಶದಲ್ಲಿ ಶನಿವಾರ ನಡೆದಿದೆ.
35 ವರ್ಷದ ಸೋಹಮ್ ಪಟೇಲ್ ಮೃತರು. ಸೋಹಮ್ ಶನಿವಾರ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೀಪಾವಳಿ ಹಬ್ಬದ ಅಂಗವಾಗಿ ಹಲವಾರು ಮಂದಿ ಸೇರಿ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಸೋಹಮ್ ಗೆ ಡಿಕ್ಕಿಯಾಗಿದೆ. ಹತ್ತಿರದಲ್ಲೇ ಮಗುವೊಂದು ಪಟಾಕಿ ಸಿಡಿಸುತ್ತಿದ್ದು, ಅದೃಷ್ಟವಶಾತ್ ಮಗು ಅಪಾಯದಿಂದ ಪಾರಾಗಿದೆ.
पुण्याच्या पिंपरी चिंचवडमध्ये एका ३५ वर्षीय व्यक्तीला भरधाव कारने धडक दिली आहे. या भीषण अपघातात त्याचा जागीच मृत्यू झाला. pic.twitter.com/kQchTx4Gxs
— ✧ 𝕾𝖍𝖚𝖇𝖍𝖆𝖒 ✧ (@shubham_pb) November 3, 2024
ಡಿಕ್ಕಿಯ ರಭಸಕ್ಕೆ ಸೋಹಮ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದು 48 ಗಂಟೆ ಕಳೆದರೂ ಆರೋಪಿ ಚಾಲಕನನ್ನು ಇನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ರಾವೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಐವರು ಮಕ್ಕಳಿಗೆ ಗಾಯ
ಇನ್ನೊಂದು ಘಟನೆಯಲ್ಲಿ ಪುಣೆಯ ಸಿನ್ಹಗಡ್ ಪ್ರದೇಶದಲ್ಲಿ ಪಟಾಕಿ ಸಿಡಿದು ಡ್ರೈನ್ ಚೇಂಬರ್ನ ಮುಚ್ಚಳ ಸ್ಫೋಟಗೊಂಡ ಪರಿಣಾಮ ಐವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Police Suspended: ಅಪರಾಧಗಳಿಗೆ ಕುಮ್ಮಕ್ಕು; ಪಾವಗಡದ ಮೂವರು ಪೊಲೀಸ್ ಪೇದೆಗಳು ಸಸ್ಪೆಂಡ್
ಚಾಕುವಿನಿಂದ ಇರಿದು ಯುವಕನ ಕೊಲೆ
ಪಟಾಕಿ ಸಿಡಿತಕ್ಕೆ ಸಂಬಂಧಿಸಿ ನಾಗ್ಪುರದಲ್ಲಿ 25 ವರ್ಷದ ಯುವಕನನ್ನು ಇರಿದು ಕೊಂದು ಹಾಕಿದ್ದಾರೆ.
ಸಂತ್ರಸ್ತನನ್ನು ಅಮೋಲ್ ವಾಘಮಾರೆ ಎಂದು ಗುರುತಿಸಲಾಗಿದ್ದು ಶನಿವಾರ ಪಟಾಕಿ ಸಿಡಿಸುವ ವಿಚಾರದಲ್ಲಿ ಯುವಕರೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ.
ಮಾತಿನ ಚಕಮಕಿಯ ನಡುವೆ ಯುವಕರು ವಾಘಮಾರೆಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.