Sunday, 15th December 2024

ಕೋಟ್ಯಂತರ ರೂಪಾಯಿ ಅವ್ಯವಹಾರ: ಅಗ್ರಿ ಗೋಲ್ಡ್ ಸಂಸ್ಥೆಯ ಮೂವರ ಬಂಧನ

ಹೈದರಾಬಾದ್: ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ, ಅಗ್ರಿ ಗೋಲ್ಡ್ ಸಂಸ್ಥೆ ನಿರ್ದೇಶಕ ಅವ್ವ ವೆಂಕಟರಾಮ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಅಗ್ರಿ ಗೋಲ್ಡ್ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವೆಡೆಗಳಲ್ಲಿ ಶಾಖೆ ಹೊಂದಿದ್ದು, ನಿರ್ದೇಶಕ ಅವ್ವವೆಂಕಟ ರಾಮ ಜನರಿಂದ ಹಣ ಕಟ್ಟಿಸಿಕೊಂಡು ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅವ್ವ ವೆಂಕಟರಾಮ ವಿರುದ್ಧ 6,400 ಕೋಟಿ ಅವ್ಯವಹಾರವೆಸಗಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಸಂಸ್ಥೆಯ ನಿರ್ದೇಶಕ ಅವ್ವ ವೆಂಕಟರಾಮ ರಾವ್, ಅವ್ವ ವೆಂಕಟ ಸೇಶು ನಾರಾಯಣ ಹಾಗೂ ಇನ್ನೋರ್ವ ನಿರ್ದೇಶಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.