Friday, 22nd November 2024

ಇನ್​ಸ್ಟಾಗ್ರಾಮ್, ಫೇಸ್​ಬುಕ್ ಮಧ್ಯದ ಕ್ರಾಸ್ ಮೆಸೇಜಿಂಗ್ ಸ್ಥಗಿತ

ನವದೆಹಲಿ: ಇನ್​​​​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಮೆಸೆಂಜರ್ ನಡುವಿನ ಕ್ರಾಸ್ – ಅಪ್ಲಿಕೇಶನ್ ಮೆಸೇಜಿಂಗ್ ಅನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ.

ಯುರೋಪಿನ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (ಡಿಎಂಎ) ನ ಕಾರಣದಿಂದ ಮೆಟಾ ಈ ಕ್ರಮಕ್ಕೆ ಮುಂದಾಗಿರಬಹುದು ಎನ್ನಲಾಗಿದೆ.

ಡಿಸೆಂಬರ್ 2023 ರ ಮಧ್ಯದಿಂದ, ಬಳಕೆದಾರರು ಇನ್ನು ಮುಂದೆ ಇನ್​ಸ್ಟಾಗ್ರಾಮ್​ನಲ್ಲಿ ಫೇಸ್​ಬುಕ್ ಖಾತೆಗಳೊಂದಿಗೆ ಚಾಟ್ ಮಾಡಲು ಸಾಧ್ಯ ವಾಗುವುದಿಲ್ಲ. ಕ್ರಾಸ್ – ಅಪ್ಲಿಕೇಶನ್ ಮೆಸೇಜಿಂಗ್ ಸ್ಥಗಿತಗೊಂಡ ನಂತರ ನೀವು ಇನ್​ಸ್ಟಾಗ್ರಾಮ್​ನಿಂದ ಫೇಸ್​ಬುಕ್ ಖಾತೆಗಳೊಂದಿಗೆ ಹೊಸ ಸಂಭಾ ಷಣೆಗಳು ಅಥವಾ ಕರೆಗಳನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ಅಪ್ಡೇಟ್​ನಲ್ಲಿ ತಿಳಿಸಿದೆ.

ಈ ಫೇಸ್​ಬುಕ್ ಖಾತೆಗಳನ್ನು ಚಾಟ್​ನಿಂದ ತೆಗೆದುಹಾಕಿದರೂ ಸಹ, ಇನ್​ಸ್ಟಾಗ್ರಾಮ್​ನಲ್ಲಿ ಆ ಫೇಸ್​ಬುಕ್ ಖಾತೆಗಳೊಂದಿಗೆ ನೀವು ಹಿಂದೆ ನಡೆಸಿದ ಚಾಟ್​ಗಳು ರೀಡ್ ಓನ್ಲಿ ಆಗಿ ಮಾರ್ಪಾಟಾಗುತ್ತವೆ ಎಂದು ಮೆಟಾ ಹೇಳಿದೆ.