ನಕ್ಸಲರು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು, ಟೆಕಮೆಟಾ ಬೆಟ್ಟದ ಬಳಿ ಐಇಡಿ ಅಳವಡಿಸಿದ್ದರು. ಅದೇ ಮಾರ್ಗವಾಗಿ ತೆರಳುತ್ತಿದ್ದ, ಸಿಆರ್ಪಿಎಫ್ 85ನೇ ಬೆಟಾಲಿಯನ್ನ ತಂಡದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಇವರೆಲ್ಲ ಹಿರೋಲಿಯಿಂದ ಪುಸ್ನರ್ ಶಿಬಿರಕ್ಕೆ ತೆರಳುತ್ತಿದ್ದರು. ಈ ವೇಳೆ ಟೆಕಮೆಟಾ ಬೆಟ್ಟದ ಸಮೀಪ ಐಇಡಿ ಸ್ಫೋಟಗೊಂಡಿದೆ. ಗಾಯಗೊಂಡ ಇಬ್ಬರಿಗೂ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯ್ಪುರಕ್ಕೆ ಕರೆದೊಯ್ಯಲಾಗಿದೆ.
ಛತ್ತೀಸ್ಗಢ್ನ ದಂತೇವಾಡಾ ಜಿಲ್ಲೆಯ ಅರನ್ಪುರ ಎಂಬಲ್ಲಿ ಕಳೆದ ತಿಂಗಳು ಇಂಥದ್ದೇ ದುರಂತ ಆಗಿತ್ತು. ಛತ್ತೀಸ್ಗಢ ಜಿಲ್ಲಾ ಮೀಸಲು ಪಡೆಯ ವಾಹನಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ಐಇಡಿ ಅಳವಡಿಸಿ ಇಟ್ಟಿದ್ದರು. ಅದು ಸ್ಫೋಟಗೊಂಡ ಪರಿಣಾಮ 11 ಯೋಧರು ಮೃತಪಟ್ಟಿದ್ದರು.
ಮೇ ತಿಂಗಳ ಪ್ರಾರಂಭದಲ್ಲಿ ಬಿಜಾಪುರದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಯಕ್ಷನ್ನ (ಕೋಬ್ರಾ) ಇಬ್ಬರು ಯೋಧರು ಗಾಯಗೊಂಡಿ ದ್ದರು.