Thursday, 12th December 2024

ಕಚ್ಚಾ ಬಾಂಬ್‌ ದಾಳಿಗೆ ಸಹಾಯಕ ಕಮಾಂಡೆಂಟ್ ಹುತಾತ್ಮ

ರಾಯ್‌ಪುರ (ಛತ್ತೀಸಗಡ): ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಎಸಗಿದ ಕಚ್ಚಾ ಬಾಂಬ್‌ ದಾಳಿಯಲ್ಲಿ ಸಿಆರ್‌ಪಿಎಫ್‌ನ ಅರಣ್ಯ ಕಾರ್ಯಾಚರಣೆ ಪಡೆ ಕೋಬ್ರಾದ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, 9 ಮಂದಿ ಕಮಾಂಡೊಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಂತಲ್‌ನಾರ್ ಅರಣ್ಯ ಪ್ರದೇಶದಲ್ಲಿ ಕಳೆದ ಶನಿವಾರ ರಾತ್ರಿ 9 ಗಂಟೆ ಸ್ಫೋಟ ಸಂಭವಿಸಿದೆ. ಈ ವೇಳೆ ಸಹಾಯಕ ಕಮಾಂಡೆಂಟ್ ನಿತಿನ್ ಭಲೆರಾವ್ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಹೆಲಿಕಾಪ್ಟರ್‌ ಮೂಲಕ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳು ಕಮಾಂಡೊಗಳು ಕೋಬ್ರಾ ಪಡೆಯ 206ನೇ ಬೆಟಾಲಿಯನ್‌ಗೆ ಸೇರಿದವು.